ಹಳೆಯಂಗಡಿ: ಹಳೆಯಂಗಡಿ ಸಮೀಪದ ಕೊಯ್ಕೊಡೆ ಎಂಬ ಊರನ್ನು ತುಳುವಲ್ಲೇ ಬರೆದು ತುಳು ಬಾಷಾಭಿಮಾನ ತೋರಿದ ಅಲ್ಲಿನ ಸ್ಥಳೀಯರು ಮಾದರಿಯಾದ ಘಟನೆ ಇಂದು ನಡೆದಿದೆ.
ವಿಶ್ವ ತುಳು ಸಮ್ಮೇಳನ ನಡೆಯಲಿರುವ ಈ ಸಂದರ್ಭದಲ್ಲಿ ತುಳು ಭಾಷೆಯನ್ನು ಪ್ರೋತ್ಸಾಹಿಸಲು ಮತ್ತು ತುಳು ಲಿಪಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೊಯ್ಕೊಡೆ `ಯುವ ಕೇಸರಿ’ ಸಂಘದ ವತಿಯಿಂದ ಊರಿನ ಹೆಸರನ್ನು ತುಳು ಲಿಪಿಯಲ್ಲಿ ಬರೆದು ಬೋರ್ಡ್ ಸ್ಥಾಪಿಸಿರುವುದು ಸಾರ್ವಜನಿಕರ ಗಮನ ಸೆಳೆಯುತ್ತಿದೆ ಮಾತ್ರವಲ್ಲದೆ, ಕಾಟಾಚಾರಕ್ಕೆ ತುಳು ಭಾಷಾ ಹೋರಾಟ ಮಾಡುತ್ತಿರುವವರಿಗೆ ಮಾದರಿಯಾಗಿದೆ.


