ಮುಂಬಯಿ: ಕಲೆ ಬದುಕನ್ನು ಸೊಬಗುಗೊಳಿಸುವ ಮಾಧ್ಯಮ. ಅದು ನಾಡಿನ ಪ್ರಜ್ಞಾವಂತಿಕೆಯ ಪ್ರತೀಕ. ಭಾರತವನ್ನು ಸಮೃದ್ಧಗೊಳಿಸುವಲ್ಲಿ ಕಲಾಪ್ರಕಾರಗಳ ಕೊಡುಗೆ ಗಮನೀಯವಾದುದು. ಕಲೆಗೆ ಸಮಸ್ತ ಜಗತ್ತನ್ನೇ ಸುಧಾರಿಸುವ ದಿವ್ಯಶಕ್ತಿಯಿದೆ. ನಾಟ್ಯದಂತಹ ಕಲೆಯಿಂದ ಭಗವಂತನ ಸಾಮಿಪ್ಯವನ್ನು  ಸಾಧಿಸುವುದಕ್ಕೆ ಸಾಧ್ಯವಿದೆ. ಹಾಗಾಗಿ ಪೋಷಕರು ಮನೆಯ ಮಕ್ಕಳನ್ನು ಕಲಾತರಗತಿಗಳತ್ತ ‌ಪ್ರೇರೇಪಿಸಬೇಕಾಗಿದೆ ಎಂದು ಆದಿಚುಂಚನಗಿರಿ ಮಠದ ಕಾವೂರು ಶಾಖಾಮಠದ ಧರ್ಮಗುರು ಶ್ರೀ ಶ್ರೀ ಡಾ. ಧರ್ಮಪಾಲನಾಥ  ಸ್ವಾಮೀಜಿ ಹೇಳಿದರು.a4
ನಾಟ್ಯನಿಲಯ ಉಳ್ಳಾಲ ಸಂಸ್ಥೆಯ ಹದಿನಾರನೇ ವರ್ಷಾಚರಣೆ ಸಲುವಾಗಿ ನಗರದ ಪುರಭವನದಲ್ಲಿ ನಡೆದ ಷೋಡಶ  ಸಂಭ್ರಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಭರತನಾಟ್ಯದಂತ ಶಾಸ್ತ್ರೀಯ ಕಲೆಗಳಲ್ಲಿ ತೊಡಗಿಕೊಂಡಿರುವ ಮಕ್ಕಳು ಬದುಕಿನಲ್ಲಿ ದಾರಿ ತಪ್ಪುವುದಿಲ್ಲ. ಕಲೆ ತಂತಾನೇ ಜೀವನ ಸಂಸ್ಕಾರವನ್ನು ಕಲಿಸಿಕೊಡುತ್ತದೆ ಎಂದು ಅವರು ತಿಳಿಸಿದರು.a3
ಶ್ರೀ ಕ್ಷೇತ್ರ ಒಡಿಯೂರುರನ ಗುರುದೇವಾನಂದ ಶ್ರೀಗಳು ಆಶೀರ್ವಚನ ನೀಡುತ್ತಾ ನಾಟ್ಯನಿಲಯ ನಾಟ್ಯಕ್ಕೆ ಮನೆ ಇದ್ದಹಾಗೆ. ನಮ್ಮ ಮನೆಯ ಮಕ್ಕಳು ಆ ಮನೆಯ ಸದಸ್ಯರಾಗಿ ದೇಶೀಯ ವಿದ್ಯೆಯನ್ನು ಕಲಿಯಬೇಕಾದುದು ಈ ಕಾಲಕ್ಕೆ ಬಹು ಅಗತ್ಯದ ಸಂಗತಿ ಎಂದು ಅಭಿಪ್ರಾಯಪಟ್ಟರು.  a2
ಶಾಂತಲಾ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್ ‌ರವರು ಗುರುವಂದನೆಯನ್ನು‌ ಸ್ವೀಕರಿಸಿದರು. ಮಂಗಳೂರಿನ ಶಾಸಕರಾದ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ನಿರ್ದೇಶಕ ಕೆ ಟಿ. ಸುವರ್ಣ, ಕೊಲ್ಯ ನಾಟ್ಯನಿಕೇತನದ ಗುರು ವಿದುಷಿ ರಾಜಶ್ರೀ ಉಳ್ಳಾಲ್, ನೃತ್ಯಗುರು ವಿದ್ವಾನ್ ಚಂದ್ರಶೇಖರ ನಾವಡ, ಬಂಟ್ವಾಳ ಮೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ದಾಮೋದರ್ ಉಳ್ಳಾಲ್, ದಿವಾಕರ್, ನಾಟ್ಯನಿಲಯದ ಗುರು ವಿದುಷಿ ಸುನಿತಾ ಜಯಂತ್ ಉಳ್ಳಾಲ್, ಸಂಸ್ಥೆಯ ಅಧ್ಯಕ್ಷ ಜಯಂತ್ ಉಳ್ಳಾಲ್, ಷೋಡಶ ಸಂಭ್ರಮ ಸಮಿತಿ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ  ಉಪಸ್ಥಿತರಿದ್ದರು.  a1
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ  ಪಿಹೆಚ್ ಡಿ ಪದವಿ ಪಡೆದ ಡಾ.‌ ಧರ್ಮಪಾಲನಾಥ ಶ್ರೀಗಳಿಗೆ ಮತ್ತು ಹಿರಿಯ ನಾಟ್ಯವಿದುಷಿ ಕಮಲಾ ಭಟ್ ರವರಿಗೆ ನಾಟ್ಯನಿಲಯ ಗೌರವ ಪ್ರಶಸ್ತಿ, ಮುಂಬೈನ ಉದ್ಯಮಿ ಶ್ರೀನಿವಾಸ್ ಸಫಲ್ಯರಿಗೆ ನಾಟ್ಯನಿಲಯ ಕಲಾಪೋಷಕ ಪ್ರಶಸ್ತಿ, ಪಿಹೆಚ್ ಡಿ ಪದವಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.‌ಅರುಣ್ ಉಳ್ಳಾಲರಿಗೆ ನಾಟ್ಯನಿಲಯ ಸಾಂಸ್ಕೃತಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಂಗ ಕಲಾಬಂಧು ಪ್ರಶಸ್ತಿ ಪಡೆದ ಕದ್ರಿ ನವನೀತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.  ಇತ್ತೀಚೆಗೆ ಅಗಲಿದ ಸಂಗೀತ ಗುರು ವಿದುಷಿ ಶೀಲಾ ದಿವಾಕರ್ ಮತ್ತು ಕೊಲ್ಯ ನಾಟ್ಯನಿಕೇತನದ ಸಬಿತಾ ಮೋಹನ್ ಕುಮಾರ್ ಅವರ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಪಣೆ ಮಾಡಿ ಗೌರವ ಸೂಚಿದರು.
ನೃತ್ಯ ಕಾರ್ಯಕ್ರಮ ನೀಡಿದ ವಿದ್ಯಾರ್ಥಿಗಳಿಗೆ ಸ್ಮರಣ ಫಲಕವನ್ನಿತ್ತು ಅಭಿನಂದಿಸಲಾಯಿತು. ಕದ್ರಿ ನವನೀತ ಶೆಟ್ಟಿ ಸ್ವಾಗತಿಸಿದರು.  ಉಪನ್ಯಾಸಕ ಡಾ. ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ರಕ್ಷಿತ್ ಉಳ್ಳಾಲ್ ವಂದಿಸಿದರು. ನಂತರ  ನಾಟ್ಯನಿಲಯದ ವಿದ್ಯಾರ್ಥಿಗಳು ವಿವಿಧ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಿದರು.

By Suddi9

Leave a Reply

Your email address will not be published. Required fields are marked *