ಕೈಕಂಬ: ಹೊಳ್ಳರಬೈಲು :“ಸ್ವಸ್ತಿಕ ಹಳ್ಳಿ ಹಬ್ಬ” ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ  ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿಯೇ ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ ಮೂಲಕ ತೊಡಗಿಸಿಕೊಳ್ಳುದರಿಂದ ಮುಂದಿನ ಭವಿಷ್ಯದಲ್ಲಿ ಸಮಾಜದಲ್ಲಿ ಗುರುತಿಸಿ ಕೊಳ್ಳುವಂತಹ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.WhatsApp Image 2022-05-14 at 2.34.52 PM

ಸ್ವಸ್ತಿಕ ನ್ಯಾಷನಲ್ ಸ್ಕೂಲ್ ನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರ “ಹಳ್ಳಿ ಹಬ್ಬ”ದ ಅಂಗವಾಗಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಕಳ್ಳಿಗೆ ಗ್ರಾ.ಪಂ ಅಧ್ಯಕ್ಷೆ ಯಶೋಧ, ಗೋವಿಂದದಾಸ್ ಕಾಲೇಜಿನ ಉಪನ್ಯಾಸಕ ವೆಂಕಟ್ರಮಣ ಭಟ್, ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ,ಶುಭ ಹಾರೈಸಿದರು.

ನ್ಯಾಯವಾದಿ ರಮೇಶ್ ಉಪಾಧ್ಯಯ, ನಾರಾಯಣ ಹೊಳ್ಳ ನೆತ್ತರಕೆರೆ ಗುತ್ತು. ಹಿರಿಯ ಭಾ ಜ ಪ ಮುಖಂಡ ಸುಬ್ರಹ್ಮಣ್ಯ ರಾವ್,, ಹಿಂ. ಜಾ. ವೇ ಜಿಲ್ಲಾಧ್ಯಕ್ಷ ಜಗದೀಶ್ ಬಂಗೇರ ಹೊಳ್ಳರಬೈಲು,ಶಿಬಿರಧಿಕಾರಿ ವಿದ್ಯಾಲಕ್ಷ್ಮಿ ಪಿ ಶೆಟ್ಟಿ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಹೊಳ್ಳ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿಠ್ಠಲ ನಾಯಕ್ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ನಡೆಯಿತು

By Suddi9

Leave a Reply

Your email address will not be published. Required fields are marked *