ಕೈಕಂಬ: ಗುರುಪುರ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಎ. ೩೦ರಂದು ಶನಿವಾರ ನಡೆದ ವಾರ್ಷಿಕ ಪ್ರತಿಷ್ಠಾಪನಾ ವರ್ಧಂತಿ ಸಂದರ್ಭದಲ್ಲಿ ಮೂಡಬಿದ್ರೆಯ ಹರಿದಾಸ ಚಂದ್ರಕಾತ್ ಭಟ್ ಅಶ್ವತ್ಥಪುರ ಇವರಿಂದ ‘ಭಕ್ತ ಮಾರ್ಕಾಂಡೇಯ’ ಹರಿಕಥಾ ಕಾಲಕ್ಷೇಪ ನಡೆಯಿತು. ತಬಲದಲ್ಲಿ ಪ್ರದೀಪ್ ಉಪಾಧ್ಯಾಯ ಹಾಗೂ ಹಾರ್ಮೋನಿಯಂನಲ್ಲಿ ರಮೇಶ್ ಹೆಬ್ಬಾರ್ ಸಹಕರಿಸಿದರು.

