ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರಕಲ್ಲಡ್ಕ ಕಳೆದ ೪ ದಶಕಗಳಿಂದ ಶಿಕ್ಷಣದ ಜೊತೆ ಜೊತೆಗೆ ಸಂಸ್ಕಾರವನ್ನು ನೀಡುತ್ತಾ ಶಿಕ್ಷಣದಲ್ಲಿ ಭಾರತೀಯತೆಯನ್ನು ತರುವ ಕಾರ್ಯವನ್ನು ಮಾಡುತ್ತಾ ಬಂದಿದೆ. ಇದೀಗ ಒಂದು ಹೆಜ್ಜೆ ಮುಂದೆಯಿಡುತ್ತಾ ಹೊಸ ಶೈಕ್ಷಣಿಕ ನೀತಿ ೨೦೨೦ರ ಆಧಾರದ ಮೇಲೆ ಒಂಭತ್ತರಿಂದ ಹನ್ನೆರಡನೇ ತರಗತಿಯವರೆಗೆ ಶಿಕ್ಷಣವನ್ನು ನೀಡಲು ಶ್ರೀರಾಮ ಸೆಕೆಂಡರಿ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ್ನು ಪಾರಂಭಿಸುತ್ತಿದೆ.DSC_1006

ಇದರ ಕಛೇರಿಯನ್ನು ಸಾದ್ವಿ ಶ್ರೀ ಮಾತಾನಂದಮಯಿ ಶ್ರೀಕ್ಷೇತ್ರ ಒಡಿಯೂರು ಇವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ತಿರುಮಲೇಶ್ವರ ಪ್ರಶಾಂತ್‌ ಇವರನ್ನು ಹಿರಿಯರ ಸಮ್ಮುಖದಲ್ಲಿ ಸೆಕೆಂಡರಿ ಸ್ಕೂಲ್‌ನ ಉಪ ಪ್ರಾಂಶುಪಾಲರನ್ನಾಗಿ ನಿಯುಕ್ತಿ ಗೊಳಿಸಲಾಯಿತು.DSC_1015

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕಸಂಘ ಪುತ್ತೂರು ಇದರ ಅಧ್ಯಕ್ಷರಾದಡಾ. ಪ್ರಭಾಕರ್ ಭಟ್‌ ಕಲ್ಲಡ್ಕ,ಡಾ. ಭೀಮೇಶ್ವರ ಜೋಶಿ ದಂಪತಿಗಳು ಶ್ರೀಕ್ಷೇತ್ರ ಹೊರನಾಡು, ಕರ್ನಾಟಕಗಡಿ ಪ್ರದೇಶಅಭಿವೃದ್ಧಿ ಪ್ರಾಧಿಕಾರ ಇದರ ಅಧ್ಯಕ್ಷರಾದ ಡಾ ಸಿ. ಸೋಮಶೇಖರ, ಕಾರ‍್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷರಾದ ಡಾ ಚಂದ್ರಶೇಖರ ಕೆರಾಡಿ, ವಿದ್ಯಾಕೇಂದ್ರದ ಅಧ್ಯಕ್ಷರಾದ ಶ್ರೀ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ,ಸಹ ಸಂಚಾಲಕರಾದ ರಮೇಶ್‌ಎನ್, ಪದವಿ ಪೂರ್ವವಿಭಾಗದ ಪ್ರಾಂಶುಪಾರಾದ ವಸಂತಬಲ್ಲಾಳ್, ಪದವಿ ವಿಭಾಗದ ಪ್ರಾಂಶುಪಾಲರಾದ ಕೃಷ್ಣಪ್ರಸಾದ್‌ ಕಾಯರ್‌ ಕಟ್ಟೆ, ವಿಭಾಗ ಪ್ರಮುಖರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *