ವಿಟ್ಲ ಮಾಣಿ: “ಭಾರತೀಯ ಜನತಾ ಪಕ್ಷದ ಪ್ರತಿ ಕಾರ್ಯಕರ್ತ ಕೂಡ ನಿರಂತರವಾಗಿ ಶಿಸ್ತು ಬದ್ಧತೆಯನ್ನು ಮೈಗೂಡಿಸಿಕೊಂಡು ಪಕ್ಷದ ಪರ ಚಟುವಟಿಕೆ ಮಾಡಿದ ಫಲದಿಂದಾಗಿಯೇ ಪಕ್ಷವಿಂದು ಎಲ್ಲಾ ಹಂತಗಳ ಚುನಾವಣೆಯಲ್ಲೂ ಮುಂಚೂಣಿಯನ್ನು ಕಾಯ್ದುಕೊಂಡಿದ್ದು ಮುಂದಿನ ದಿನಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಕೂಡ ಪಕ್ಷದ ಅಭ್ಯರ್ಥಿಯೇ ವಿಜಯ ಪಡೆಯುವಲ್ಲಿ ಕಾರ್ಯಕರ್ತರು ಶ್ರಮಿಸುವರು” ಎಂದು ಕ್ಷೇತ್ರದ ಅದ್ಯಕ್ಷರಾದ ಶ್ರೀಯುತ ದೇವಪ್ಪ ಪೂಜಾರಿ ಅಭಿಪ್ರಾಯ ಪಟ್ಟರು.
ಬಿಜೆಪಿ ಮಹಾಶಕ್ತಿ ಕೇಂದ್ರ ವಿಟ್ಲ ಪಡ್ನೂರು ವತಿಯಿಂದ ಅನಂತಾಡಿ ಗ್ರಾಮದ ದೇವಿನಗರ ದೇವಿಮಂದಿರದಲ್ಲಿ ನಡೆದ ಪಕ್ಷದ ಬೃಹತ್ ಸಭೆಯಲ್ಲಿ ಅಧ್ಯಕ್ಷರು ಮಾತಾಡುತ್ತಿದ್ದರು.ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಮಾತಾನಾಡಿ “ಬಿಜೆಪಿ ಪಕ್ಷದ ಕಾರ್ಯಕರ್ತರು ಸೈನಿಕನಂತೆ.ಸೌಜನ್ಯಕ್ಕೆ ಇನ್ನೊಂದು ಹೆಸರೇ ಬಿಜೆಪಿ. ಆದುದರಿಂದ ಕಾರ್ಯಕರ್ತರು ಜನರ ಕಷ್ಟ ನಷ್ಟಕ್ಕೆ ಯಾವ ಸಮಯದಲ್ಲೂ ಸ್ಪಂದಿಸುವ ಮೂಲಕ ಅವರ ಅನುಭೂತಿ ಪಡೆಯಬೇಕು ಆ ಮೂಲಕ ಪಕ್ಷಕ್ಕೆ ಗಟ್ಟಿಯಾದ ಸ್ಥಾನ ಕಲ್ಪಿಸಬೇಕು” ಎಂದರು. ವೇದಿಕೆಯಲ್ಲಿ ರಾಜ್ಯ ಎಸ್ ಸಿ ಮೋರ್ಚ ಕಾರ್ಯಕಾರಿಣಿ ಸದಸ್ಯ ದಿನೇಶ್ ಅಮ್ಟೂರು, ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸನತ್ ಕುಮಾರ್ ರೈ,ಪ್ರಧಾನ ಕಾರ್ಯದರ್ಶಿ ಅರವಿಂದ ರೈ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅನಂತಾಡಿ ಗ್ರಾಮ ಪ್ರಮುಖ್ ಆಗಿ ನಾಗೇಶ್ ಭಂಡಾರಿ ಕರಿಂಕ, ನೆಟ್ಲಮುಡ್ನೂರು ಗ್ರಾಮ ಪ್ರಮುಖ್ ಆಗಿ ಅಶೋಕ್ ರೈ ಎಳ್ಕಾಜೆ,ವಿಟ್ಲ ಪಡ್ನೂರು ಗ್ರಾಮ ಪ್ರಮುಖರಾಗಿ ಜಯಂತ ಪಿ ಅವರನ್ನು ಆಯ್ಕೆ ಮಾಡಲಾಯಿತು.
ಬೃಹತ್ ಸಂಖ್ಯೆಯಲ್ಲಿ ಸೇರಿದ ಈ ಸಭೆಯಲ್ಲಿ ಅನಂತಾಡಿ ಗ್ರಾಮ ಪ್ರಭಾರಿ ರಂಜಿತ್ ಮೈರ, ಸಿ.ಎ ಬ್ಯಾಂಕ್ ಉಪಾಧ್ಯಕ್ಷ ತನಿಯಪ್ಪ ಗೌಡ,ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಪೂಜಾರಿ,ಉಪಾಧ್ಯಕ್ಷ ಕುಸುಮಾಧರ ಗೌಡ, ವೀರಕಂಭ ಪಂಚಾಯತ್ ಅಧ್ಯಕ್ಷ ದಿನೇಶ್, ವಿಟ್ಲ ಪಡ್ನೂರು ಪಂಚಾಯತ್ ಅಧ್ಯಕ್ಷೆ ರೇಷ್ಮಾ ಶಂಕರ್, ಉಪಾಧ್ಯಕ್ಷ ನಾಗೇಶ್ ಶೆಟ್ಟಿ, ಪಂಚಾಯತ್ ಸದಸ್ಯೆಯರಾದ ಶ್ರೀಮತಿ ಸುಜಾತ ಸುರೇಶ್, ಶ್ರೀಮತಿ ಮಮಿತ ಕೇಶವ,ಶ್ರೀಮತಿ ಸಂದ್ಯಾ ವಿಶ್ವನಾಥ, ಮಹಿಳಾ ಮೋರ್ಚ ಮಂಡಲ ಉಪಾಧ್ಯಕ್ಷೆ ಗೀತಾ,ಎಲ್ ಡಿ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ ಬಾಯಿಲ, ಸಾಮಾಜಿಕ ಜಾಲತಾಣ ಪ್ರಮುಖ ಶಿವರಾಮ ಶೆಟ್ಟಿ ಕರಿಂಕ, ಮಾಧ್ಯಮ ಪ್ರಮುಖ್ ದೇವಿಪ್ರಸಾದ್ ಶೆಟ್ಟಿ,ವೀರಕಂಭ ಬೂತ್ ಅಧ್ಯಕ್ಷರಾದ ಶ್ರೀ ಸದಾಶಿವ ,ಅನಂತಾಡಿ ಬೂತ್ ಅಧ್ಯಕ್ಷರಾದ ಶ್ರೀ ತಿಮ್ಮಪ್ಪ ಗೌಡ,ಶ್ರೀ ಕುಂಞಣ್ಣ ಗೌಡ, ನೆಟ್ಲ ಮುಡ್ನೂರು ಸಂಚಾಲಕರಾದ ಹರೀಶ್ ಅಂಗರಾಜೆ, ಸಹ ಸಂಚಾಲಕ ಸತೀಶ್ ಪೂಜಾರಿ ಕೊಂಬಿಲ, ರೈತ ಮೋರ್ಚ ಸದಸ್ಯ ಜಯರಾಮ ಆಚಾರ್ಯ, ಬೂತ್ ಪ್ರಧಾನ ಕಾರ್ಯದರ್ಶಿ ಸಂತೋಷ ಪಿಲಿಚಂಡಿಗುಡ್ಡ,ಯುವ ಮೋರ್ಚ ಕಾರ್ಯದರ್ಶಿ ಹೇಮಂತ್,ವಿರಕಂಭ ಪಂಚಾಯತ್ ಸದಸ್ಯೆ ಶ್ರೀಮತಿ ಜಯಂತಿ ,ಶ್ರೀಮತಿ ಮೀನಾಕ್ಷಿ,ಮಹಿಳಾ ಮೋರ್ಚ ಅಧ್ಯಕ್ಷೇ ಸೀಮಾ ಮಾಧವ್, ಪ್ರಮುಖರಾದ ಶ್ರೀ ನವೀನ ಶೆಟ್ಟಿ ಪುಣ್ಕೆದಡಿ, ಉಮೇಶ್ ಪೂಜಾರಿ ನಿಡ್ಯಾರ ,ಪವನ್ ಕುಮಾರ್ ಹಾಗೂ ಪಕ್ಷದ ಅನ್ಯನ್ಯ ಜವಬ್ದಾರಿ ಇರುವ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಹಿತೈಷಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಅರವಿಂದ ರೈ ಸ್ವಾಗತಿಸಿ, ನಾಗೇಶ್ ಭಂಡಾರಿ ಕರಿಂಕ ವಂದಿಸಿದರು
