ಮುಂಬಯಿ: ಶ್ರೀ ದಿಗಂಬರ ಜೈನ ಮಠ, ಜೈನಕಾಶಿ ಮೂಡಬಿದಿರೆ ಮಹಾಕ್ಷೇತ್ರ ಇತಿಹಾಸ ಪ್ರಸಿದ್ದ ಸಾವಿರ ಕಂಬ ಬಸದಿಯಲ್ಲಿ ಎ.02ರಂದು ಶನಿವಾರ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿಗಳವರ ಪಾವನ ಸಾನಿಧ್ಯ ಮಾರ್ಗದರ್ಶನದಲ್ಲಿ ವಸಂತ ಪೂಜೆ ಯುಗಾಧಿ ಪರ್ವದ ನಿಮಿತ್ತ ಭಗವಾನ್ ಶ್ರೀ ಶ್ರೀ ೧೦೦೮ ಚಂದ್ರನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ಜ್ವಾಲಾ ಮಾಲಿನಿ ಯಕ್ಷಿಷೋಡಷೋಪಚಾರ ಪೂಜೆ ಹಾಗೊ ಸರ್ವಹ್ನ ಯಕ್ಷ ಉತ್ಸವ ದಿಕ್ಪಾಲ ಪೂ ಜೆ ಶುಭಕೃತ್ ನಾಮ ಸಂವಸ್ಸರ ಫಲಶ್ರವನಾ ನೆರವೇರಿಸಲ್ಪಟ್ಟಿತು.Jaina Mutt YUGADI

ಈ ಸಂಧರ್ಭ ಜೈನ ಮಹಾಸಂಸ್ಥಾನದ ಪೀಠಾಧ್ಯಕ್ಷ ಭಾರತ ಭೂಷಣ ಜಗದ್ಗುರು ಸ್ವಸ್ತಿಶ್ರೀ ಜಗದ್ಗುರು ಸ್ವಸ್ತಿಶ್ರೀ ಡಾ| ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಆಶೀರ್ವಾದ ನೀಡಿ ಧರ್ಮ ಕಾರ್ಯದಲ್ಲಿ ತೊಡಗಿಸಿ ಕೊಂಡವರಿಗೆ ಗ್ರಹ ಬಾಧೆ ಕಡಿಮೆ ನಿತ್ಯ ಧರ್ಮ ನಿರತರಾಗಿ ಧಾನ ಧರ್ಮ ಕಾರ್ಯಗಳಲ್ಲಿ ನಮ್ಮನ್ನು ನಾವು ಹೆಚ್ಚು ತೊಡಗಿಸಿ ಕೊಂಡಷ್ಟು ಜೀವನದಲ್ಲಿ ಶಾಂತಿ ನೆಮ್ಮದಿ ಪಡೆಯುವುದು ಸಾಧ್ಯ ಎಂದು ನೆರೆದ ಭಕ್ತರನ್ನು ಹರಸಿದರು.

ಈ ಸಂದರ್ಭದಲ್ಲಿ ಕೆ.ಅಭಯಚಂದ್ರ ಜೈನ್, ಪಟ್ಟಣ ಶೆಟ್ಟಿ ಸುದೇಶ್, ದಿನೇಶ್ ಬಿ, ಚಕ್ರೆಶ್ ಅರಿಗಾ, ಪುಷ್ಪರಾಜ್, ಪ್ರವೀಣ ಚಂದ್ರ, ಡಾ| ಎಸ್ಮೊ ಪಿ.ವಿದ್ಯಾ ಕುನಾರ್ ಮೊದಲಾವರು ಉಪಸ್ಥಿತರಿದ್ದರು.

ಯುಗಾದಿಯಿಂದ ಒಂದು ತಿಂಗಳು ಪರ್ಯಂತ ಬಸದಿಯಲ್ಲಿ ಪ್ರತಿದಿನ ತ್ರಿಕಾಲ ಪುಜೆ ಬಳಿಕ ರಾತ್ರಿ ಅಭಿಷೇಕ ಉತ್ಸವ ನಡೆಯುದು ಇಲ್ಲಿಯ ವಿಶೇಷವಾಗಿದೆ ಎಂದು ಬಸದಿ ಮುಕ್ತೇಸರ ಆದರ್ಶ್ ಜೈನ್ ತಿಳಿಸಿದರು.

By suddi9

Leave a Reply

Your email address will not be published. Required fields are marked *