ಬಂಟ್ವಾಳ: ಇಲ್ಲಿನ ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವವು ಇದೇ ೫ರಂದು ವಾಮಂಜೂರು ಅನಂತ ಪದ್ಮನಾಭ ಉಪಾಧ್ಯಾಯ ಇವರ ಮಾರ್ಗದರ್ಶನದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ ೯ ಗಂಟೆಗೆ ದೇವರಿಗೆ ನವಕ ಕಲಶಾಭಿಷೇಕ, ಮಧ್ಯಾಹ್ನ ೧೨.೩೦ ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ೧ ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಅಂಜೆ ೬ ಗಂಟೆಗೆ ಭಜನೆ, ರಾತ್ರಿ ೭ ಗಂಟೆಗೆ ರಂಗಪೂಜೆ ಮತ್ತು ರಾತ್ರಿ ೮ಗಂಟೆಗೆ ದೇವರ ಬಲಿ ಉತ್ಸವ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.
