ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಚಾಂದ್ರಮಾನ ಯುಗಾದಿ ಆಚರಣೆಯನ್ನು ಏ.೦೨ರಂದು ಶನಿವಾರ ಆಚರಿಸಲಾಯಿತು. ದೇವಳದಲ್ಲಿ ವಿಶೇಷ ಪ್ರಾರ್ಥನೆ ಸರ್ವಾಲಂಕಾರ ಪೂಜೆ ನಡೆಯಿತು. ದೇವಳದ ಪ್ರ. ಅರ್ಚಕರಾದ ಮಾಧವ ಭಟ್, ಕೆ. ರಾಮ್ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್ ವಿಶೇಷವಾಗಿ ಪ್ರಾರ್ಥಿಸಿ ಯುಗಾದಿಯ ಪ್ರಯುಕ್ತ ದೇವಳಕ್ಕೆ ಬರುವ ಭಕ್ತರಿಗೆ ಬೇವು ,ಬೆಲ್ಲ, ಪಂಚಕಜ್ಜಾಯ ನೀಡಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್ , ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು ಅನುವಂಶಿಕ ಮೊಕ್ತೇಸರರಾದ ಯು, ತಾರನಾಥ ಆಳ್ವ ಸೂರ್ಯ ನಾರಾಯಣ ರಾವ್, ದೇವಳದ ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ, ನಾಗೇಶ್ ರಾವ್, ದೇವಳದ ಸಿಬ್ಬಂದಿವರ್ಗ ಹಾಗೂ ವೆಂಕಟೇಶ್ ನಾವಡ ಪೊಳಲಿ, ಚಂದ್ರಾಹಾಸ ಶೆಟ್ಟಿ ನಾರಳ, ಪುರುಷೋತ್ತಮ ವಾಮದಪದವು, ಪವನ್ ಶೆಟ್ಟಿ ಮುತ್ತೂರು, ವಿದ್ಯಾಚರಣ್ ಭಂಡಾರಿ ಮೊಗರುಗುತ್ತು ಮತ್ತಿತರರು ಉಪಸ್ಥಿತರಿದ್ದರು. ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಏ.೧೫ರಂದು ಶುಕ್ರವಾರ “ರಾಜ್ಯ ಧಾರ್ಮಿಕ ದಿನ” ಎಂದು ಆಚರಿಸಲಾಗುವುದು.
