ಬಂಟ್ವಾಳ: ಜನರ ಬಳಿಗೆ ತೆರಳಿ ಆರೋಗ್ಯ ತಪಾಸಣೆ ನಡೆಸುವ ನಿಟ್ಟಿನಲ್ಲಿ ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಉಳಿಪಾಡಿಗುತ್ತು ಅವರು ವಿಶೇಷ ಮುತುವರ್ಜಿಯಿಂದ ಬಂಟ್ವಾಳ ಕ್ಷೇತ್ರಕ್ಕಾಗಮಿಸಿದ ಎಸ್ ಆರ್ ಟಿಸಿ ಸಾರಿಗೆ ಐಸಿಯು ಬಸ್‌ನ ಕುರಿತಂತೆ ರಾಜ್ಯ ಸಾರಿಗೆ ಸಚಿವ ಶ್ರೀರಾಮುಲು ಅವರನ್ನು ಬಂಟ್ವಾಳ ಶಾಸಕ ರಾಜೇಶ್ ಉಳಿಪ್ಪಾಡಿಯವರು ಭೇಟಿಯಾಗಿ ಚರ್ಚಿಸಿದರು.
ಸಾರಿಗೆ ಐಸಿಯು ಬಸ್ 155 ದಿನಗಳಲ್ಲಿ, ಬಂಟ್ವಾಳ ಕ್ಷೇತ್ರದ 59 ಗ್ರಾಮಗಳಿಗೂ ಸಂಚರಿಸಿ ಒಟ್ಟು 7422 ಮಂದಿಯನ್ನು ತಪಾಸಣೆಗೊಳಪಡಿಸಿ, ಅವರ ರೋಗ ಲಕ್ಷಣವನ್ನು ಪತ್ತೆ ಹಚ್ಚಿ ರೋಗಿಗೆ ಚಿಕಿತ್ಸೆ ನೀಡಿರುವ ಬಗ್ಗೆ ಶಾಸಕರು ಸಚಿವರಿಗೆ ಮಾಹಿತಿ ನೀಡಿದರು.
ಸಕಲ ಸೌಲಭ್ಯ, ನುರಿತ ವೈದ್ಯಕೀಯ
ಸಿಬ್ಬಂದಿಯನ್ನೊಳ ಗೊಂಡ ಈ ಸಾರಿಗೆ ಐಸಿಯು, ಬಸ್ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾಮ ತಂದರು. ಪಂಚಾಯತ್‌ಗೆ ತೆರಳಿ, ಅಲ್ಲಿಗಾಗಮಿಸುವ ಜನರ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ನಡೆಸಲಾಗಿದೆಯಲ್ಲದೆ ಜನರ ಬೇಡಿಕೆಯ ಹಿನ್ನಲೆಯಲ್ಲಿ ಹೃದ್ರೋಗ ತಪಾಸಣೆಗಾಗಿ ಇಸಿಜಿ ಯಂತ್ರವನ್ನು ಈ ಬಸ್ಸಿಗೆ ಅಳವಡಿಸ ಲಾಗಿರುವುದನ್ನು ಶಾಸಕ ರಾಜೇಶ್ ನ್ಯಾಕ್ ಸಚಿವರ ಗಮನಕ್ಕೆ ಶಾಸಕರು ಕ್ಷೇತ್ರದ ಜನರ ಆರೋಗ್ಯ ಕಾಳಜಿಯನ್ನು ಸಚಿವರು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಬಂಟ್ವಾಳ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೇವದಾಸ ಶೆಟ್ಟಿ ಉಪಸ್ಥಿತರಿದ್ದರು.
