ಮುಂಬಯಿ : ಉಡುಪಿ ಬಾರ್ಕೂರು ಇಲ್ಲಿನ ಶ್ರೀ ಏಕನಾಥೇಶ್ವರೀ ದೇವಸ್ಥಾನದ ಪ್ರಾಂಗಣದಲ್ಲಿ ಇಂದಿಲ್ಲಿ ಆದಿತ್ಯವಾರ “ವಿಶ್ವ ದೇವಾಡಿಗ ಮಹಾ ಮಂಡಳ” ಸ್ಥಾಪನಾ ಪೂರ್ವಬಾವಿ ಸಮಾಲೋಚನಾ ಸಭೆಯು ಜರುಗಿತು.Vishwa Devadiga Sabhe A1

ಶ್ರೀ ಏಕನಾಥೇಶ್ವರೀ ದೇವಿಯ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಸಭೆ ಪ್ರಾರಂಭ ಮಾಡಲಾಯಿತು. ದೇವಾಡಿಗ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ ಮಾತನಾಡಿ “ವಿಶ್ವ ದೇವಾಡಿಗ ಮಹಾ ಮಂಡಳ” ಆಸ್ತಿತ್ವಕ್ಕೆ ತರುವ ಬಗ್ಗೆ ಪ್ರಸ್ತಾಪಿಸಿ, ದೇವಾಡಿಗ ಸಮುದಾಯವನ್ನು ಸಂಘಟಿತ ಚೌಕಟ್ಟಿನಲ್ಲಿ ತಂದು, ಭದ್ರ ಬುನಾದಿ ಹಾಕಲು ಮಹಾಮಂಡಳದ ಅಗತ್ಯತೆ ಇರುವುದಾಗಿ ತಿಳಿಸಿದರು. ಆ ಮೂಲಕ ಸಮಾಜವು ಅಭಿವೃದ್ಧಿ ಹೊಂದುವAತಾಗಲು ವಿಶ್ವ ದೇವಾಡಿಗ ಮಹಾಮಂಡಳ ಸ್ಥಾಪನೆ ಅತ್ಯಗತ್ಯವಾಗಿದೆ ಎಂದೂ, ಅದಕ್ಕಾಗಿ ತನ್ನೆಲ್ಲಾ ಸಹಾಯ ಮತ್ತು ಸಹಕಾರನ್ನು ನೀಡುವುದಾಗಿ ತಿಳಿಸಿದರು.

ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಡಾ. ದೇವರಾಜ್ ಕೆ. ಮಂಗಳೂರು, ಹಿರಿಯಡ್ಕ ಮೋಹನ್ ದಾಸ್, ಜನಾರ್ಧನ ದೇವಾಡಿಗ ಬಾರ್ಕೂರು, ಅಣ್ಣಯ್ಯ ಸೇರಿಗಾರ್, ಜನಾರ್ಧನ ದೇವಾಡಿಗ ಉಪ್ಪುಂದ, ರಘುರಾಮ್ ದೇವಾಡಿಗ ಆಲೂರು, ಗಣೇಶ್ ದೇವಾಡಿಗ ಅಂಬಲಪಾಡಿ, ಇವರು ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಮಹಾ ಮಂಡಳದ ರಚನೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.

ಈ ಸುದಿನದಂದು ರಾಜ್ಯದೆಲ್ಲೆಡೆಯಿಂದ ಆಗಮಿಸಿದ ದೇವಾಡಿಗ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ, ಮಹಾಮಂಡಳ ಸ್ಥಾಪಿಸುವ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ಮಹಾ ಮಂಡಳದ ರಚನೆಯ ಕುರಿತಾಗಿ ಉಪಯುಕ್ತ ಸಲಹೆ, ಸೂಚನೆಗಳನ್ನು ನೀಡಿದರು.

ಮುಂದಿನ ದಿನಗಳಲ್ಲಿ ಮಹಾಮಂಡಳದ ಅಗತ್ಯವಿರುತ್ತದೆ. ಈ ಅಗತ್ಯತೆಯನ್ನು ಮನಗಂಡು, ನಾವುಗಳೆಲ್ಲರೂ ಸಂಘಟಿತಗೊಳ್ಳಲು, ಸಂಘಟನೆಯನ್ನು ಬಲಪಡಿಸಲು ಬದ್ಧರಾಗಿದ್ದು, ಮಹಾ ಮಂಡಳ ರಚಿಸಲು ತಮ್ಮೆಲ್ಲರ ಸಹಕಾರವಿರುವುದಾಗಿ ಒಮ್ಮತದ ಐತಿಹಾಸಿಕ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

ದೇವಾಡಿಗ ಸಮುದಾಯದ ಹಿತಾಸಕ್ತಿ ಹಾಗೂ ಸರ್ವತೋಮುಖ ಪ್ರಗತಿಗಾಗಿ ಮಹಾಮಂಡಳದ ರಚನೆಗೆ ತಮ್ಮೆಲ್ಲಾ ಸಹಕಾರವನ್ನು ನೀಡುವುದಾಗಿ ಸಭೆಯಲ್ಲಿ ಒಮ್ಮತದ ನಿರ್ಣಯವನ್ನು ಕೈಗೊಳ್ಳಲಾಯಿತು.

ಸಮಿತಿಯ ಮೂಲಕ ಸಮಗ್ರ ಅಧ್ಯಯನ ನಡೆಸಿ ಕಾಲಮಿತಿಯಲ್ಲಿ ವರದಿ ಸಿದ್ಧಪಡಿಸಿ, ಸದರಿ ಸಮಿತಿಯ ವರದಿಯ ಆಧಾರದ ಮೇಲೆ ಮುಂದಿನ ಯೋಜನೆಗಳು ರೂಪಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

By suddi9

Leave a Reply

Your email address will not be published. Required fields are marked *