ಬಂಟ್ವಾಳ: ಇಲ್ಲಿನ ಅಜಿಲಮೊಗರು ಸಮೀಪದ ಪುಣ್ಕೆದಡಿ ನಿವಾಸಿ ವಿಮಲ ಗುರುವ ಮುಗೇರ ಎಂಬವರ ಪುತ್ರ ವಿಜಯ್ (೨೧) ಇವರು ಮಂಗಳೂರಿನ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಹಡಿಯಿಮದ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.
ತೀರಾ ಬಡತನ ಹೊಂದಿದ್ದ ಇವರು ಮಂಗಳೂರು ಪಡೀಲು ಎಂಬಲ್ಲಿ ಸೋಮವಾರ ೪ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
