ಮುಂಬಯಿ : ಲೋನಾವಾಲಾ ನಗರ ಸ್ವಚ್ಛತಾ ಕಾರ್ಯದಲ್ಲಿ ಶ್ಲಾಘನೀಯ ಸಾಧನೆ ಮಾಡಿ ರಾಷ್ಟ್ರಮಟ್ಟದಲ್ಲಿ ಗುರುರಿಸಿ ಕೊಂಡಿದೆ. ಇಂತಹ ಸ್ವಚ್ಛತಾ ಕೆಲಸ ಇನ್ನೂ ಮುಂದುವರಿಸಿ ಕೆಲಸ ಮಾಡಬೇಕು ಮತ್ತು ಎಲ್ಲರಿಗೂ ಮಾದರಿ ಆಗಬೇಕು. ಆವಾಗಲೇ ದೇಶ-ವಿದೇಶಿಗ ಪ್ರವಾಸಿಗರು ಖಂಡಿತವಾಗಿಯೂ ಲೋನಾವಾಲಾ ನಗರವನ್ನು ಆನಂದಿಸುತ್ತಾರೆ ಎಂದು ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ವಿಶ್ವಾಸ ವ್ಯಕ್ತಪಡಿಸಿದರು.
ಇಂದಿಲ್ಲಿ ಭಾನುವಾರ ಮಹಾಲಕ್ಷಿ ್ಮ ಮಹಿಳಾ ಮಂಚ ಲೋನಾವಾಲಾದಲ್ಲಿ ಆಯೋಜಿಸಿದ್ದ ಸ್ವಚ್ಛ ಸಮೀಕ್ಷೆ-ಸ್ವಚ್ಛತಾ ದೂತ್ ಹಾಗೂ ಕರೋನಾ ಯೋಧ-ಆರೋಗ್ಯ ದೂತ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯಪಾಲ ಕೋಶ್ಯಾರಿ ಮಾತನಾಡಿ ಲೋನಾವಾಲಾ ನಗರ ಪರಿಷತ್‌ನ ಕಾರ್ಯವೈಖ್ಯರಿಯನ್ನು ಪ್ರಶಂಸಿ ಅಭಿನಂದಿಸಿದರು.
ಕೊಶ್ಯಾರಿ ಮಾತನಾಡಿ, ಲೋನಾವಾಲಾ ನಗರ ಸ್ವಚ್ಛತಾ ಸ್ಪರ್ಧೆಯಲ್ಲಿ ದೇಶದಲ್ಲೇ ಹೆಸರು ಮಾಡಿದೆ. ಲೋನಾವ್ಲಾ ನಗರದ ಈ ಕಾರ್ಯವು ರಾಷ್ಟ್ರಮಟ್ಟದಲ್ಲಿ ವೈಭವೀಕರಿಸಲ್ಪಟ್ಟಿದೆ. ಲೋನಾವಾಲಾ ಸುಂದರವಾಗಿದೆ, ಇದನ್ನು ಇನ್ನಷ್ಟು ಸುಂದರ ನಗರವನ್ನಾಗಿ ಮಾಡಲು ಪ್ರತಿಯೊಬ್ಬರ ಕೊಡುಗೆ ಅಗತ್ಯವಿದೆ. ಸ್ವಚ್ಛ, ಸುಂದರ ಲೋನಾವ್ಲಾ ರಾಷ್ಟ್ರೀಯ ಗುರುತಾಗಿ ಮುಂದುವರಿಯುತ್ತದೆ ಮತ್ತು ದೇಶಾದ್ಯಂತ ಪ್ರವಾಸಿಗರು ಇದನ್ನು ಆನಂದಿಸುತ್ತಾರೆ.
ಕೊರೋನಾ ಅವಧಿಯಲ್ಲಿ ಲೋನಾವಾಲಾ ಸೇರಿದಂತೆ ಇಡೀ ದೇಶದ ನಾಗರಿಕರು ಮಾಡಿದ ಕೆಲಸ ಅದ್ಭುತವಾಗಿದೆ. ನಮ್ಮ ದೇಶವು ತನ್ನ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡಿದೆ. ದೇಶದಲ್ಲಿ ಬಿಕ್ಕಟ್ಟು ಬಂದಾಗಲೆಲ್ಲಾ ನಮ್ಮ ಇಡೀ ದೇಶವು ಒಟ್ಟಾಗಿ ಕೆಲಸ ಮಾಡುತ್ತಿದೆ ಎಂದು ತೋರುತ್ತದೆ. ಕೊರೊನಾ ಕಾಲದಲ್ಲೂ ದೇಶ ಒಗ್ಗಟ್ಟಾಗಿ ಹೋರಾಡಿದೆ. ನಾವು ಶಾಶ್ವತವಾಗಿ ಒಟ್ಟಿಗೆ ಇದ್ದರೆ, ಯಾವುದೇ ಬಿಕ್ಕಟ್ಟು ಇರುವುದಿಲ್ಲ. ನಾಡಿನ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸುವ ನಿಟ್ಟಿನಲ್ಲಿ ಒಗ್ಗಟ್ಟಾಗಿ ಮುಂದುವರಿಯೋಣ ಎಂದರು.
ಸುರೇಖಾ ಜಾಧವ್ ಮಾತನಾಡಿ ಮಹಿಳಾ ಮಂಚದ ಸೇವಾಕಾರ್ಯ ತಿಳಿಸಿ ಸ್ವಚ್ಛತಾ ಸ್ಪರ್ಧೆಯಲ್ಲಿ ಲೋನಾವಾಲಾ ನಗರವು ಮಾಡಿದ ಕೆಲಸಗಳು ಮತ್ತು ಕರೋನಾ ಅವಧಿಯಲ್ಲಿ ಮಾಡಿದ ಕೆಲಸಗಳ ಬಗ್ಗೆ ಪ್ರಸ್ತಾವಿಸಿದರು. ರಾಷ್ಟ್ರದ ಸ್ವಚ್ಛ ಸರ್ವೇಕ್ಷಣಾ ಅಭಿಯಾನದಡಿಯಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆ ಜಿಲ್ಲೆಯ ಲೋನವಲಾ ಇಲ್ಲಿನ ಲೋನವಲಾ ನಗರ ಪರಿಷತ್‌ನ (ಮುನ್ಸಿಪಾಲ್ ಕೌನ್ಸಿಲ್) ದೇಶದಲ್ಲೇ ಎರಡನೇ ಸ್ಥಾನಕ್ಕೆ ಪಾತ್ರವಾಗಿದ್ದು ರಾಷ್ಟ್ರದ ಘನತೆವೆತ್ತ ರಾಷ್ಟ್ರಪತಿ ಗೌರವಿಸಿದನ್ನು ಮತ್ತೆ ನೆನಪಿಸಿ ಕೊಂಡರು. ಹಾಗೂ ಮಹಿಳಾ ಮಂಚ ಪರವಾಗಿ ರಾಜ್ಯಪಾಲರಿಗೆ ಗೌರವ ಫಲಕವನ್ನಿತ್ತು ಗೌರವಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಲೋನಾವಾಲಾ ನಗರ ಪರಿಷತ್‌ನ ಮಾಜಿ ಮಹಾಪೌರೆ ಸುರೇಖಾ ಜಾಧವ್, ಮಾಜಿ ಉಪಾಧ್ಯಕ್ಷ (ಉಪ ಮೇಯರ್) ನಿಟ್ಟೆ ನಡಿಮನೆ ಶ್ರೀಧರ್ ಎಸ್.ಪೂಜಾರಿ, ಮಹಾಲಕ್ಷಿ÷್ಮ ಮಹಿಳಾ ಮಂಚದ ಅಧ್ಯಕ್ಷೆ ಸುಜಾತಾ ಮೆಹ್ತಾ, ನಾಗರಿಕರು, ಜನಪ್ರತಿನಿಧಿಗಳು, ಮಹಿಳಾ ಮಂಚದ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
