ಬಂಟ್ವಾಳ :ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘ ಬೆಂಗಳೂರು ಇದರ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಸಭಾ ಭವನದಲ್ಲಿ ಜರಗಿದ ಮೆಸ್ಕಾಂ ಬಂಟ್ವಾಳ ವಿಭಾಗೀಯ ಕಛೇರಿಯಲ್ಲಿ ಮೂರು ವರ್ಷಕ್ಕೂ ಅಧಿಕ ಕಾರ್ಯ ನಿರ್ವಾಹಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ಇದೀಗ ಪುತ್ತೂರು ವಿಭಾಗಕಛೇರಿಗೆ ವರ್ಗಾವಣೆಗೊಂಡ ರಾಮಚಂದ್ರ ಎಂ. ರವರನ್ನು ಮೆಸ್ಕಾಂ ಪ್ರತಿನಿಧಿ, ರಾಜ್ಯ ಕಾರ್ಯಕಾರಿ ಸದಸ್ಯರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ನಾಗರಾಜ ಶೆಟ್ಟಿ, ರಾಜ್ಯ ಉಪಾಧ್ಯಕ್ಷ ಪುರುಷೋತ್ತಮ , ಮೆಸ್ಕಾಂ ಮುಖ್ಯ ಅಭಿಯಂತರರಾದ ಪುಷ್ಪಾ , ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್ , ಪ್ರಶಾಂತ್ ಪೈ ಬಂಟ್ವಾಳ ವಿಭಾಗ ಮೆಸ್ಕಾಂ, ಸಂತೋಷ್ ನಾಯಕ್ ಮುಖ್ಯ ಕಾರ್ಯನಿರ್ವಾಹಕ ಇಂಜಿನಿಯರ್ ಕಾವೂರು ವಿಭಾಗ ಮೆಸ್ಕಾಂ, ಶೈಲೇಶ್ ಮಲ್ಯ ಮೆಸ್ಕಾಂ ಪ್ರತಿನಿಧಿ, ಲಕ್ಷ್ಮೀನಾರಾಯಣ ಅಡ್ಯಂತಾಯ ವಿಟ್ಲ ಉಪಸಮಿತಿ, ಪದ್ಮನಾಭ ಮಯ್ಯ ಗೌರವ ಸಲಹೆಗಾರ ಬಂಟ್ವಾಳ ಉಪಸಮಿತಿ, ಮೆಸ್ಕಾಂ ಪ್ರತಿನಿಧಿ ಲಕ್ಷ್ಮೀನಾರಾಯಣ ಬಂಟ್ವಾಳ ಮತ್ತಿತರರು ಉಪಸ್ಥಿತರಿದ್ದರು.
