ಬಂಟ್ವಾಳ: ಬಂಟ್ವಾಳ ತಾಲೂಕಿನ ನರಿಕೊಂಬಿನಲ್ಲಿರುವ ಶ್ರೀಮತಿ ಪ್ರತಿಭಾ ಮತ್ತು ಡಾ|ಸುಬ್ರಹ್ಮಣ್ಯ ಇವರ ಪುತ್ರಿ ಕು|ಸ್ವಸ್ತಿ ಪ್ರತಿಶತ ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆಯ ಜ್ಯೂನಿಯರ್ ಹಾಡುಗಾರಿಕೆ ವಿಭಾಗದಲ್ಲಿ 99.25(397/400) ಕೀರ್ತನಾ ಸಂಗೀತ ಶಾಲೆ ಮಾಣಿಮಜಲು, ನರಿಕೊಂಬು ಇಲ್ಲಿ ಅಂಕಗಳನ್ನು ಗಳಿಸಿರುತ್ತಾಳೆ. ಈಕೆ ವಿದ್ವಾನ್ ಕೃಷ್ಣ ಆಚಾರ್ಯ ಹಾಗೂ ಶ್ರೀಮತಿ ರಜತಾ ಕೃಷ್ಣ ಆಚಾರ್ಯ ಇವರ ಶಿಷ್ಯೆ. 
