ಬಂಟ್ವಾಳ : ಪುಂಚಮೆ ಹಾಲು ಉತ್ಪಾದಕರ ಸಹಕಾರ ಸಂಘ ದಲ್ಲಿ ಬೊಲ್ಪು ರೈತ ಉತ್ಪಾದಕರ ಕಂಪನಿ ಆಶ್ರಯದಲ್ಲಿ ತೆಂಗು ಕೃಷಿ ಮಾಹಿತಿ ಕಾರ್ಯಕ್ರಮ ಮಾ.23ರಂದು ನಡೆಯಿತು.
ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ವಾಮನ ಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು.
ಕೆಎಂಎಫ್ ಜಿಲ್ಲಾ ನಿರ್ದೇಶಕಿ ಸವಿತಾ ಯನ್. ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಂಪನಿ ಅಧ್ಯಕ್ಷ ರಾಜಾ ಬಂಟ್ವಾಳ್ ತೆಂಗು ಬೆಳೆ ಅಭಿವೃದ್ಧಿ, ಉತ್ತಮ ಗಿಡಗಳ ಪೂರೈಕೆ, ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ಮತ್ತು ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ರಾಧಾಕೃಷ್ಣ ರೈ ಶುಭ ಹಾರೈಸಿದರು.
ಕೆಎಂಫ್ ಸಹಾಯಕ ಮೆನೇಜರ್ ಡಾ. ಟಿ. ವಿ. ಶ್ರೀನಿವಾಸ್ ಶುದ್ಧ ಹಾಲು ಉತ್ಪಾದನೆಗೆ ರೈತರು ಒತ್ತು ನೀಡುವಂತೆ ವಿನಂತಿಸಿದರು. ಕೆಎಂಫ್ ವಿಸ್ತರಣಾಧಿಕಾರಿ ಸರೋಜಿನಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

