ಬಂಟ್ವಾಳ: ಇಲ್ಲಿನ ಬಿ.ಸಿ.ರೋಡಿನಲ್ಲಿ ವಲಯ ಬಂಟರ ಸಂಘದ ಪದಗ್ರಹಣ ಕಾರ್ಯಕ್ರಮ ಸಂಘದ ಅಧ್ಯಕ್ಷ ಚಂದ್ರಹಾಸ ಡಿ.ಶೆಟ್ಟಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ನೂತನ ಅಧ್ಯಕ್ಷರಾಗಿ ದಿವಾಕರ ಶೆಟ್ಟಿ ಪರಾರಿಗುತ್ತು, ಉಪಾಧ್ಯಕ್ಷರಾಗಿ ಶಂಕರ್ ಎಲ್. ಶೆಟ್ಟಿ, ಕಾರ್ಯದರ್ಶಿಯಾಗಿ ಯಶವಂತ ಶೆಟ್ಟಿ ಅಜೆಕಲ, ಜತೆ ಕಾರ್ಯದರ್ಶಿಯಾಗಿ ತಿಮ್ಮಯ್ಯ ಶೆಟ್ಟಿ ಕಲ್ಲಕಟ್ಟ, ಖಜಾಂಚಿಯಾಗಿ ಕರುಣಾಕರ ಶೆಟ್ಟಿ ಮಡ್ಯಾರುಗುತ್ತು, ಸಂಘಟನಾ ಕಾರ್ಯದರ್ಶಿಯಾಗಿ ಜಗನ್ನಾಥ ರೈ ಮೇರಾವು ಅಧಿಕಾರ ಸ್ವೀಕರಿಸಿದರು.

ಇದೇ ವೇಳೆ ಮಹಿಳಾ ವೇದಿಕೆ ಅಧ್ಯಕ್ಷರಾಗಿ ಶೋಭಾ ವಿ. ಹೆಗ್ಡೆ ಮತ್ತು ಯುವ ವಿಭಾಗ ಅಧ್ಯಕ್ಷರಾಗಿ ಭವಿಷ್ ಶೆಟ್ಟಿ ಕೋಡಿಬೆಟ್ಟು ಅಧಿಕಾರ ಸ್ವೀಕರಿಸಿದರು. ಮಹಿಳಾ ವಿಭಾಗ ಉಪಾಧ್ಯಕ್ಷೆ ವಸಂತಿ ಎಲ್. ಶೆಟ್ಟಿ, ಕಾರ್ಯದರ್ಶಿ ಆಶಾ ಶೆಟ್ಟಿ ಹೊಸಮನೆ, ಜತೆ ಕಾರ್ಯದರ್ಶಿ ಭಾರತಿ ಚೌಟ, ಖಜಾಂಚಿ ವಿಧ್ಯಾ ಎ. ರೈ, ಸಾಂಸ್ಕೃತಿಕ ಕಾರ್ಯದರ್ಶಿ ಮಣಿಮಾಲ ಶೆಟ್ಟಿ, ಯುವ ವಿಭಾಗ ಉಪಾಧ್ಯಕ್ಷರಾಗಿ ಸ್ಪರ್ಶ ಆಳ್ವ, ಕಾರ್ಯದರ್ಶಿಯಾಗಿ ನಿಶಾಂತ್ ಶೆಟ್ಟಿ ಮಡ್ಯಾರ್, ಜತೆ ಕಾರ್ಯದರ್ಶಿ ನವನೀತ ಶೆಟ್ಟಿ ಅಮ್ಟಾಡಿ, ಖಜಾಂಚಿ ನಿಶಿಲ್ ಆಳ್ವ ಬಿ ಸಿ ರೋಡು, ಸಂಘಟನಾ ಕಾರ್ಯದರ್ಶಿ ಉನ್ನತಿ ಶೆಟ್ಟಿ, ಸತೀಶ್ ಶೆಟ್ಟಿ, ತಾಲ್ಲೂಕು ಸಂಗದ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಚೌಟ ಬದಿಗುಡ್ಡೆ ಇದ್ದರು.

By suddi9

Leave a Reply

Your email address will not be published. Required fields are marked *