ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಮಾ.20ರಂದು ಭಾನುವಾರ ಮಧ್ಯಾಹ್ನ ೨.೩೦ ಕ್ಕೆ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ನಡೆಯಿತು. ೨.೩೦ ರಿಂದ ೩.೧೫ ರವರೆಗೆ ಲತೀಶ್ ಮತ್ತು ಬಳಗದವರಿಂದ ಭಜನೆ ಇತ್ತು.20220320_152619

ಅನಂತರ ಸಭಾ ಕಾರ್ಯಕ್ರಮದಲ್ಲಿ ಮಂಗಳೂರಿನ ರಾಮಕೃಷ್ಣ ಮಠದ ಪೂಜ್ಯ ಸ್ವಾಮಿ ರಘುನಂದಜಿ ಮಹರಾಜ್ ಮತ್ತು ಪ್ರೊ. ಡಾ| ಚಕ್ರಪಾಣಿ ಎಚ್‌ಒಡಿ ಮೆಡಿಸಿನ್ ಕೆ.ಎಂ.ಸಿ. ಆಸ್ಪತ್ರೆ, ಮಂಗಳೂರು ಇವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆಯ ಅತಿಥಿಗಳಾಗಿ ಆಗಮಿಸಿದ್ದರು.20220320_164400

ಸ್ವಾಮಿ ವಿವೇಕಚೈತನ್ಯಾನಂದ ಅವರು ವಿದ್ಯಾರ್ಥಿವೇತನ ಮತ್ತು ಇತರ ವಿಧಾನಗಳ ಮೂಲಕ ವಿದ್ಯಾರ್ಥಿಗಳನ್ನು ಬೆಂಬಲಿಸುವ ಉದ್ದೇಶಿಸಿ ಸಂಕ್ಷಿಪ್ತ ಟಿಪ್ಪಣಿ ನೀಡಿದರು. ಪೂಜ್ಯ ರಘುರಾಮಾನಂದಜಿ ಮಹರಾಜ್ ತಮ್ಮ ಆಶೀರ್ವಚನದಲ್ಲಿ ಸ್ಫೂರ್ತಿದಾಯಕ ಭಾಷಣ ಮಾಡಿದರು. ಡಾ| ಚಕ್ರಪಾಣಿಯವರು ಈ ಸಂದರ್ಭದಲ್ಲಿ ಚೆನ್ನಾಗಿ ಮಾತಾಡಿದರು. ೧೩೬ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.. ಸಾಂಕೇತಿಕವಾಗಿ ೨೯ ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಲಾಯಿತು. ಅನಂತರ ಬಂದವರಿಗೆಲ್ಲಾ ಉಪಾಹಾರ ವಿತರಿಸಲಾಯಿತು.20220320_164510

By Suddi9

Leave a Reply

Your email address will not be published. Required fields are marked *