ಮುಂಬಯಿ: ಕರ್ನಾಟಕ ರಾಜ್ಯದ ರಾಜ್ಯಪಾಲ ತಾವರ್ ಚಂದ್ರ ಗೆಲ್ಹೊಟ್ ಇಂದಿಲ್ಲಿ ಸೋಮವಾರ ಸಂಜೆ ಮೂಡಬಿದಿರೆಯ ಶ್ರೀ ಜೈನ ಮಠಕ್ಕೆ ಬೇಟಿ ನೀಡಿ1008 ಶ್ರೀ ಭಗವಾನ್ ಪಾರ್ಶ್ಶ್ವನಾಥ ಸ್ವಾಮಿ ಅಭಿಷ್ಟವರ ಪ್ರಧಾಯಿನಿ ಕೂಶ್ಮಾಂಡಿನೀ ದೇವಿ, ಧವಳತ್ರಯ ಗ್ರಂಥ, ಜಿನ ಬಿಂಬ ದರ್ಶನ ಪಡೆದು ಆರತಿ ಅರ್ಘ್ಯ ಎತ್ತಿ ವಿನಯ ಪೂಜೆ ಸಲ್ಲಿಸಿದರು. ಹಾಗೂ ಪ್ರಾಚೀನ ತಾಡ ಓಲೆಗ್ರಂಥ ಗಳನ್ನು ವೀಕ್ಷಿಸಿ ಸಂತೋಷ ಪಟ್ಟರು. 

ಜಗದ್ಗುರು ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳ ಅಪೇಕ್ಷೆ ಮೇರೆಗೆ ಜೈನಕಾಶಿ ಬಸದಿ ಗಳ ನಾಮ ಫಲಕ ಅನಾವರಣ ಗೊಳಿಸಿ ವಿಶ್ವದಲ್ಲಿ ಹಿಂಸೆ ಯುದ್ಧ ಅಸಹನೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಜೈನ ತೀರ್ಥಂಕರ ಭಗವಾನ್ ಆದಿನಾಥ ಸ್ವಾಮಿ, ಪಾರ್ಶ್ವನಾಥ ಸ್ವಾಮಿ, ಮಹಾವೀರ ಸ್ವಾಮಿ ಬದುಕು ಗೋಡು ಅಹಿಂಸಾ ಪರಮೋ ಧರ್ಮ ಎಂಬ ವಿಶ್ವ ಬಾತೃತ್ವದ ಉತ್ತಮ ಸಂದೇಶ ನೀಡಿ ಲೋಕಶಾಂತಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಮೂಡುಬಿದಿರೆ ಜೈನಕಾಶಿ ಶ್ರೀಮಠ ಇಲ್ಲಿಯ ಗುರು ಪರಂಪರೆ ಧರ್ಮ ಜಾಗೃತಿಯನ್ನು ಸಹಸ್ರ ಸಹಸ್ರ ವರ್ಷದಿಂದ ಮಾಡುತ್ತ ಬಂದಿದೆ. ಇಲ್ಲಿಯ ಪ್ರಾಚೀನ ತಾಡವೋಲೆ ಗ್ರಂಥ ಬಿಂಬ ದರ್ಶನಮಾಡಿ ಸಂತೋಷ ವಾಯಿತು. ಬಾಲ್ಯ ದಿಂದಲೂ ನಾವು ಜೈನ ಧರ್ಮದ ಣಮೋಕಾರ ಮಂತ್ರ ಹಾಗೂ ಅಹಿಂಸಾ ಸಂದೇಶ ದಿಂದ ಪ್ರಭಾವಿತ ಗೊಂಡಿದ್ದೇನೆ ಎಂದರು. 

ರಮರಾಣಿ ಶೋದ ಸಂಸ್ಥಾನದ ಅಮೂಲ್ಯ ಗ್ರಂಥಗಳ ಬಗ್ಗೆ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಜೈನ ಮಠ ಮೂಡು ಬಿದಿರೆ ಕೈಗೊಂಡ ಯೋಜನೆಗೆ ಸಹಕರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ತಿಳಿಸುದಾಗಿ ಭರವಸೆ ನೀಡಿದರು. 

ಪೂಜ್ಯ ಭಟ್ಟಾರಕ ಸ್ವಾಮೀಜಿ ಮಾತನಾಡಿ ಸಮಸ್ತ ಲೋಕದ ಕಲ್ಯಾಣಕ್ಕೆ ಸಾಮರಸ್ಯ ಸಹನೆ ಅಹಿಂಸೆ ಮೈತ್ರಿಯಿಂದ ಲೋಕಶಾಂತಿ ಯುದ್ಧ ಸಾವು ನೋವು ನಿಲ್ಲಲು ದೇಶದ ನಾಯಕರು ಪ್ರಯತ್ನ ಮಾಡಬೇಕು ಮೂಡುಬಿದಿರೆ ಒಂದು ಪ್ರಾಚೀನ ಜೈನ ಕೇಂದ್ರ ಅಧ್ಯಾತ್ಮ ಕೇಂದ್ರ ಶಾಂತಿ ಸೌಹಾರ್ದಗಳ ಸಾಹಿತ್ಯ ಸಂಸ್ಕೃತಿಗಳ ಕೇಂದ್ರ ಆಗಿದ್ದು ದೇಶದ ಹಿರಿಯ ಉನ್ನತ ನಾಯಕರಲ್ಲಿ ಉತ್ತಮ ಸಂಬಂಧ ಇರಿಸಿ ಕೊಂಡು ಧರ್ಮ ಸಾಹಿತ್ಯ ಕಲೆ ಬಗ್ಗೆ ಅಪಾರ ಗೌರವ ಇರುವ ರಾಜ್ಯಪಾಲರು ಕ್ಷೇತ್ರಕ್ಕೆ ಮುಂದೆಯೂ ಆಗಾಗ ಬೇಟಿ ನೀಡಲಿ ಎಂದರು. ಶ್ರೀಪಾದರು ರಾಜ್ಯಪಾಲರನ್ನು ಶಾಲು ಹೊದಿಸಿ ಜಪಸರ ಹಾರ, ಕೃತಿ ಸ್ಮರಣಿಕೆ ಶ್ರೀಫಲ ನೀಡಿ ಹರಸಿ ಆಶೀರ್ವಾದಿಸಿದರು. ಅಂತಯೇ ಶ್ರೀಗಳು ಕೈಗೆತ್ತಿಕೊಂಡ ಯೋಜನಾ ಮನವಿ ಪತ್ರ ನೀಡಿದರು.

ಈ ಸಂಧರ್ಭ ಮೂಡಬಿದಿರೆ ಪುರಸಭೆ ವತಿಯಿಂದ ಶ್ರೀ ಪ್ರಸಾದ್, ಪುರಸಭೆ ಮುಖ್ಯಾಧಿಕಾರಿ ಇಂದೂ, ರಾಷ್ಟ್ರೀಯ ಅಂಗಾಂಗ ಫೌಂಡೇಶನ್ ಕಾರ್ಯಾಧ್ಯಕ್ಷ ಲಾಲ್ ಗೊಯಲ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ರಾಜ್ಯಪಾಲರನ್ನು ಗೌರರ್ಪಣೆ ಮಾಡಿದರು. ತದನಂತರ ರಾಜ್ಯಪಾಲರು ಜಗತ್ಪ್ರಸಿದ್ಧ ಸಾವಿರ ಕಂಬ ಬಸದಿ ದರ್ಶನ ಮಾಡಿ ಇಲ್ಲಿನ ಇತಿಹಾಸ ಶಿಲ್ಪವಾಸ್ತು ವೈಭವದ ಮಾಹಿತಿ ಕೇಳಿ ಸಂತೋಷ ಪಟ್ಟರು.

ಪಟ್ಣ ಶೆಟ್ಟಿ ಸುದೇಶ್, ಶ್ರೀ ದಿನೇಶ್, ಆದರ್ಶ್, ಕುಲದೀಪ ಅರಮನೆ, ಶ್ವೇತಾ, ಶಂಭವ್, ಪೂರ್ಣಚಂದ್ರ, ಡಾ. ಎಸ್. ಪಿ ವಿದ್ಯಾ ಕುಮಾರ್ ಉಪಸ್ಥಿತರಿದ್ದರು. ಎಂ. ಬಾಹುಬಲಿ ಪ್ರಸಾದ್ ಸ್ವಾಗತಿಸಿದರು. ಸ್ವಸ್ತಿಶ್ರೀ ಕಾಲೇಜು ಪ್ರಾಂಶುಪಾಲೆ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಕಾಲೇಜು ವಿದ್ಯಾರ್ಥಿಗಳು ಪ್ರಾರ್ಥನೆಗೈದರು. ಸಂಜಯಂಥ ಕುಮಾರ್ ಶೆಟ್ಟಿ ಧನ್ಯವದಿಸಿದರು
