ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಣ್ಣೋರಿ, ಬ್ರಿಂಡೇಲ್ ಒಕ್ಕೂಟ, ಕೈಕಂಬ ವಲಯದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ತೆಂಕಎಡಪದವು ಇದರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಯಣ ಪೂಜೆಯು ಹಾಗೂ ಧಾರ್ಮಿಕ ಸಭೆಯು ಇತ್ತಿಚೇಗೆ ತೆಂಕಎಡಪದವು ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಡಪದವು ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಣ್ಣ ಶೆಟ್ಟಿ ವಹಿಸಿದ್ದರು. ಮಂಗಳೂರು ಸತ್ಸಾಂಗ ಸಮಿತಿ ಸಂಚಾಲಕ ವಾಸುದೇವ ಆರ್. ಕೊಟ್ಟಾರಿ ಧಾರ್ಮಿಕ ಉಪನ್ಯಾಸ ನೀಡಿದರು.
ಮುಖ್ಯಅತಿಥಿಯಾಗಿ ಶ್ರೀ ಕ್ಷೇತ್ರ ಧಮಱಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ರಾಘವ ಎಂ. ಹಾಗೂ ಚಂದ್ರಶೇಖರ ಸಪಳಿಗ, ಶ್ರೀಧರ್ ರಾವ್, ಉದಯ ಆಳ್ವ ಉಪಸ್ಥಿತರಿದ್ದರು.
ಪುರಂದರ ದೇವಾಡಿಗ ಸ್ವಾಗತಿಸಿ ರೋಹಿಣಿ ಧನ್ಯಾವಾದವಿತ್ತರು ಕೇಶವ ಎ. ಕಾರ್ಯಕ್ರಮ ನಿರೂಪಿಸಿದರು
