ಸುದ್ದಿ9ಕೈಕಂಬ:ಮಂಗಳೂರು ಧರ್ಮಪ್ರಾಂತ್ಯದ ವತಿಯಿಂದ ವಾಮಂಜೂರಿನ ಸಂತ ಜೋಸೆಫರ ಚಚರ್್ ಪಾಲನಾ ಸಮಿತಿಯ ಕಥೋಲಿಕ್ ಸಭಾ ಮಂಗಳೂರು ಪ್ರದೇಶ(ರಿ) ವಾಮಂಜೂರು ಘಟಕ, ಭಾರತೀಯ ಯುವಸಂಚಾಲನ ವಾಮಂಜೂರು ಮತ್ತು ವಾಮಂಜೂರು ಪರಿಸರದ ನಾಗರೀಕರು ಇವರ ಸಹಯೋಗದಲ್ಲಿ ನ.1 ಶನಿವಾರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಾಮಂಜೂರು ಪೇಟೆಯ ವಠಾರದಲ್ಲಿ ಸ್ಚಚ್ಚಭಾರತ ಅಭಿಯಾನದ ಅಂಗವಾಗಿ ಸ್ಚಚ್ಚತಾ ಕಾರ್ಯಕ್ರಮವು ನಡೆಯಿತು. ಇದರ ಉದ್ಘಾಟನೆಯನ್ನು ವಾಮಂಜೂರು ಚಚರ್್ನ ಧರ್ಮಗುರುಗಳು ವಂ.ಸಿಪ್ರಿಯನ್ ಪಿಂಟೋ ಉದ್ಘಾಟಿಸಿದರು. ಅತಿಥಿಗಳಾಗಿ ತಿರುವೈಲು ವಾಡರ್್ನ ನಗರಸಭಾ ಸದಸ್ಯೆ ಹೇಮಲತ ಆರ್.ಸಾಲ್ಯಾನ್, ತಿರುವೈಲು ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷ ಬಾವು ಬ್ಯಾರಿ, ಹಾಗೂ ನಿವೃತ್ತ ಶಿಕ್ಷಕ ನಾಗೇಂದ್ರ ರಾವ್ ಉಪಸ್ಥಿತರಿದ್ದರು.








