ತಿರುವನಂತಪುರ: ಕೇರಳದ ಕೋಜಿಕ್ಕೊಡೆ ಎಂಬಲ್ಲಿ ನಡೆದ ನೈತಿಕ ಪೊಲೀಸ್ ಗಿರಿ ವಿರೋಧಿಸಿ ಹಮ್ಮಿಕೊಂಡಿದ್ದ `ಕಿಸ್ಸಿಂಗ್ ಡೇ’ ಕಾರ್ಯಕ್ರಮಕ್ಕೆ ತಿರುವನಂಥಪುರಂನ ಪೊಲೀಸರು ಸಕಾಲಿಕ ಅಡ್ಡಿಪಡಿಸಿ ಸಾರ್ವಜನಿಕ ಸ್ಥಳದಲ್ಲಿ ನಡೆಯಲಿದ್ದ ಅನೈತಿಕ ದಂಧೆಗೆ ಬ್ರೇಕ್ ಹಾಕಿದ್ದಾರೆ. ಆದರೂ ಕೆಲವು ಕುಗೆಟ್ಟು ಹೋಗಿದ್ದ ಜನರು ಸಾರ್ವಜನಿಕ ಸ್ಥಳದಲ್ಲಿಯೇ ಕಿಸ್ ಕೊಟ್ಟು ಪೊಲೀಸರ ಅತಿಥಿಯಾದರು. ಆದರೂ ಇದಾವುದಕ್ಕೂ ಜಗ್ಗದ ಕೆಲವು ಪ್ರೇಮಿಗಳು ಪೊಲೀಸ್ ವ್ಯಾನ್ನಲ್ಲಿಯೇ ಪರಸ್ಪರ ಚುಂಬಿಸಿ ಪೊಲೀಸರ ಕೆಂಗಣ್ಣಿಗೆ ಗುರಿಯಾದರು.
ಸುಮಾರು 300ಕ್ಕೂ ಹೆಚ್ಚು ಜೋಡಿಗಳು ಕಿಸ್ ಡೇಗೆ ಬೆಂಬಲ ಸೂಚಿಸಿ ಬಂದಿದ್ದರು. ಆದರೆ ಪೊಲೀಸರ ಭಯಕ್ಕೆ ಕೆಲವರು ಹೆದರಿ ಕೆಲವರಷ್ಟೇ `ಸಿಹಿಮುತ್ತು’ ಹಂಚಿಕೊ0ಡರು. ಮರೀನ್ ಬೀಚ್ ಬಳಿ ಸೇರಿದ್ದ 50ಕ್ಕೂ ಹೆಚ್ಚಿನ ಜೋಡಿಗಳನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲಾಯಿತು.

1

2

3

4

5

7

8

 

 

ಕೊಚ್ಚಿಯಲ್ಲಿ ಕೆಲವೊಂದು ಸಾಮಾಜಿಕ ಕಾರ್ಯಕರ್ತರು ಇಂಥದೊಂದು ಕಾರ್ಯಕ್ರಮವನ್ನು ಮಾಡುವ ಮೂಲಕ ಅನೈತಿಕತೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಭಾರತ ಸುಸಂಸ್ಕೃತ ದೇಶ. ಇಂಥಾ ದೇಶದಲ್ಲಿ ಅನೈತಿಕತೆಯನ್ನು ಯಾವ ಮಟ್ಟಕ್ಕೂ ಪ್ರೋತ್ಸಾಹಿಸಬಾರದು ಎಂದು ಇದಕ್ಕೆ ವ್ಯಾಪಕವಾದ ವಿರೋಧ ವ್ಯಕ್ತಪಡಿಸಿದರು. ಈ ವೇಳೆಗೆ ಗೊಂದಲ ಉಂಟಾದರೂ ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ನಿಭಾಯಿಸಿದರು. ಕೊಚ್ಚಿಯಲ್ಲಿ ಮುತ್ತಿನ ಮಳೆಯನ್ನೇ ಸುರಿಸಬೇಕೆಂದಿದ್ದ ಪ್ರೇಮಿಗಳಿಗೆ ಪೊಲೀಸರಿಂದ ನಿರಾಶೆ ಉಂಟಾಯಿತು. ಪೊಲೀಸರ ಸಕಾಲಿಕ ಕ್ರಮಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

By suddi9

Leave a Reply

Your email address will not be published. Required fields are marked *