ಮುಂಬಯಿ: ಉಪನಗರ ಪೊವಾಯಿ ಇಲ್ಲಿ ಸೇವಾನಿರತ ಕನ್ನಡ ಸೇವಾ ಸಂಘ ಪೊವಾಯಿ ಇದರ ಮುತುವರ್ಜಿಯಲ್ಲಿ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ನಗರ ಸೇವಕಿ ಅಶ್ವಿನಿ ಆಶೋಕ್ ಮಾಟೆಕರ್ ಇವರ ಶಿಫಾರಸ್ಸಿನಂತೆ ಕನ್ನಡ ಸೇವಾ ಸಂಘದ ಕಟ್ಟಡದ ಎದುರಿನ ಮಾರ್ಗದ ವೃತ್ತಕ್ಕೆ ಕೃಷ್ಣೈಕ್ಯ ಶ್ರೀ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ನಾಮವನ್ನು ಹೆಸರಿಸಿದ್ದು ನೂತನ ಹೆಸರಿನೊಂದಿಗೆ ವೃತ್ತವನ್ನು ಇತ್ತೀಚೆಗೆ ಉದ್ಘಾಟಿಸಲಾಯಿತು. ಪೇಜಾವರಶ್ರೀಗಳ ಹೆಸರನ್ನು ಇಡುವಂತೆ ಕನ್ನಡ ಸಂಘದ ಮಾಜಿ ಅಧ್ಯಕ್ಷ ರಮೇಶ್ ಡಿ.ರೈ ಹಾಗೂ ಆಡಳಿತ ಸಮಿತಿ ಸದಸ್ಯ ಪೇತ್ರಿ ವಿಶ್ವನಾಥ ಶೆಟ್ಟಿ ಇವರು ಮನವಿ ಸಲ್ಲಿಸಿದ್ದರು.IMG-20220226-WA0085

ಕನ್ನಡ ಸೇವಾ ಸಂಘದ ಅಧ್ಯಕ್ಷ ನ್ಯಾಯವಾದಿ ಆರ್.ಜಿ ಶೆಟ್ಟಿ ಶ್ರೀಫಲ ಹೊಡೆದು ರಿಬ್ಬನ್ ಕತ್ತರಿಸಿ ಶ್ರೀ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ವೃತ್ತ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಮಾಜ ಸೇವಕ ಅಶೋಕ್ ಮಾಟೆಕರ್, ಸಂಘದ ಮಾಜಿ ಅಧ್ಯಕ್ಷರಾದ ನನಯಗರಡಿ ಪ್ರಭಾಕರ ಶೆಟ್ಟಿ, ಸುಧಾಕರ ಜಿ.ಪೂಜಾರಿ, ಕಯ್ಯಾರಗುತ್ತು ರಮೇಶ್ ಡಿ.ರೈ, ಕಾರ್ಯದರ್ಶಿ ನಾಗರಾಜ ಗುರುಪುರ, ಕೋಶಾಧಿಕಾರಿ ಸಂದೇಶ ಶೆಟ್ಟಿ ಬೆಳ್ಳೆ, ರಾಜೇಶ್ ಆರ್.ಪೂಜಾರಿ, ಮಹಿಳಾ ಕಾರ್ಯಧ್ಯಕ್ಷೆ ಶೋಭಾ ರಮೇಶ್ ರೈ. ಸಾಂಸ್ಕೃತಿಕ ಸಮಿತಿ ಕಾರ್ಯಧ್ಯಕ್ಷೆ ಪ್ರಶಾಂತಿ ಡಿ.ಶೆಟ್ಟಿ, ಮಹಿಳಾ ವಿಭಾಗದ ಸಲಹೆಗಾರ್ತಿ ಶೈಲಾ ಎಸ್.ಶೆಟ್ಟಿ. ಜ್ಯೋತಿ ಆರ್.ಜಿ ಶೆಟ್ಟಿ, ಮಹಿಳಾ ಕಾರ್ಯದರ್ಶಿ ರೇಖಾ ಸಿ.ಶೆಟ್ಟಿ, ಸುಗುಣ ಕೆ.ಶೆಟ್ಟಿ, ಉಷಾ ಆರ್.ಸಾಲಿಯಾನ್, ಸರೋಜಿನಿ ಪೂಜಾರಿ, ಸವಿತಾ ಕೆ.ಶೆಟ್ಟಿ, ಪಣಿಯೂರು ಪ್ರಭಾಕರ್ ಶೆಟ್ಟಿ ಹಾಗೂ ಸಂಘದ ಸದಸ್ಯರನೇಕರು, ಪರಿಸರದ ಜನರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *