ಬಂಟ್ವಾಳ: ಇಲ್ಲಿನ ಎಲಿಯನಡುಗೋಡು ಗ್ರಾಮದ ಮೂಡಾಯಿಬೆಟ್ಟು ನಿವಾಸಿ, ಪ್ರಗತಿಪರ ಕೃಷಿಕ ಬೇಬಿ ಶೆಟ್ಟಿ ಇವರ ಪತ್ನಿ ಸುಮತಿ ಬಿ.ಶೆಟ್ಟಿ (೬೨) ಇವರು ಹೃದಯಾಘಾತದಿಂದ ಗುರುವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ ಪುತ್ರ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಪಕ್ಷಿಪ್ರೇಮಿಯಾಗಿದ್ದ ಇವರು ನೇಜಿ ನಾಟಿ ಮತ್ತು ಹೈನುಗಾರಿಕೆ ಜೊತೆಗೆ ತನ್ನ ಪುತ್ರ ನಿತ್ಯಾನಂದ ಶೆಟ್ಟಿ ಅವರ ‘ಗುಬ್ಬಚ್ಚಿಗೂಡು ಅಭಿಯಾನ’ದ ಮಾರ್ಗದರ್ಶಕರಾಗಿದ್ದರು.
