ಬಂಟ್ವಾಳ : ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಯಿ ಗ್ರಾಮ ಪಂಚಾಯತ್ಗೊಳಪಟ್ಟ ಬೂತ್ ಅಧ್ಯಕ್ಷರ ಮನೆ ಮನೆ ಭೇಟಿ “ನಮ್ಮ ನಡೆ ಬೂತ್ ಕಡೆ” ಕಾರ್ಯಕ್ರಮವು ೨೨-೦೨-೨೦೨೨ನೇ ಮಂಗಳವಾರ ನಡೆಯಿತು. ಮಾಜಿ ಸಚಿವ ಬಿ ರಮಾನಾಥ ರೈಯªರ ನೇತೃತ್ವದಲ್ಲಿ ಬೂತ್ ಅಧ್ಯಕ್ಷರ ನಿವಾಸದಲ್ಲಿ ತೆಂಗಿನ ಸಸಿಯನ್ನು ನೆಡುವ ಮುಖಾಂತರ “ಕಾಂಗ್ರೆಸ್ ಪಕ್ಷ ಕಲ್ಪವೃಕ್ಷ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನನ್ನ ರಾಜಕೀಯ ಜೀವನದಲ್ಲಿ ಪಕ್ಷದ ತತ್ವ ಸಿದ್ಧಾಂತ ಮತ್ತು ವೈಯಕ್ತಿಕ ವರ್ಚಸ್ಸಿನಿಂದ ಪಕ್ಷಕ್ಕೆ ಹಾಗೂ ಕಾರ್ಯಕರ್ತರ ಗೌರವಕ್ಕೆ ಚ್ಯುತಿ ಬಾರದ ರೀತಿಯಲ್ಲಿ ರಾಜಕೀಯ ಮಾಡಿರುವುದು ನನಗೆ ಸಂತೋಷ ತಂದಿದೆ ಎಂದು ಮನದಾಳದ ಮಾತನ್ನು ಆಡಿದರು. ಕಾರ್ಯಕರ್ತರು ಬೂತ್ ಮಟ್ಟದಿಂದಲೇ ತಮ್ಮ ನಾಯಕತ್ವವನ್ನು ವೃದ್ಧಿಸುವ ಅವಕಾಶವನ್ನು ಸದೃಢಗೊಳಿಸುವಂತೆ ಕರೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಮಾತನಾಡಿ ಕಾರ್ಯಕರ್ತರು ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಸಕ್ರಿಯಗೊಳ್ಳುವಂತೆ ವಿನಂತಿಸಿದರು. ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡದೆ ಶಿಸ್ತಿನಿಂದ ಪಕ್ಷವನ್ನು ಸಂಘಟಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಜಗದೀಶ್ ಕೊಯಿಲ, ಹಿಂದುಳಿದ ವರ್ಗದ ಅಧ್ಯಕ್ಷರಾದ ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಪೂಜಾರಿ ಜೋರಾ, ವಲಯ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ರಾಯಿ, ಬೂತ್ ಸಮಿತಿ ಅಧ್ಯಕ್ಷರುಗಳಾದ ಸತೀಶ್ ಪೂಜಾರಿ ಕೊಯಿಲ, ಪ್ರಶಾಂತ್ ಹೊರಂಗಳ,ಕುಕ್ಕಿಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೀತಾರಾಮ ಶಾಂತಿ, ಮುಖಂಡರಾದ ದೇವಪ್ಪ ಕರ್ಪೆ, ರಾಮಸುಂದರ್ ಗೌಡ, ರಾಘವೇಂದ್ರ ರಾಯಿ, ಚಂದ್ರಶೇಖರ ಆಚಾರ್ಯ, ನೋಣಯ್ಯ ಸಪಲ್ಯ, ಜಯಲಕ್ಷ್ಮಿ ಎಸ್ ನಾಯ್ಕ್, ಶಿವರಾಜ್ ಶೆಟ್ಟಿ, ರುಕ್ಕಯ್ಯ ಬಂಗೇರಾ, ಜಗದೀಶ್ ಶೆಟ್ಟಿ, ಪೃಥ್ವಿರಾಜ್ ಶೆಟ್ಟಿ, ಕಿರಣ್ ಕೊಯಿಲ, ಮುರಳಿ, ಬೋಜರಾಜ್ ಕೊಡಂಗೆ, ಸಚಿದಾನಂದ ಕೊಯಿಲ, ಭಾರತಿ ಸಪಲ್ಯ, ಧನಂಜಯ ಶೆಟ್ಟಿ, ಶೇಖರ ಪಾಂಡವರಗುಡ್ಡೆ, ನಿತೇಶ್ ಕೊಯಿಲ, ಮಾಧವ ಶೆಟ್ಟಿ ಪಾಂಡವರಗುಡ್ಡೆ ಉಪಸ್ಥಿತರಿದ್ದರು.
