ಕೈಕಂಬ: ಮಂಗಾಜೆ ಶ್ರೀ ಕೋರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ಹಾಗೂ ರಾಹು ದೈವಗಳ ಪುನರ್ ಪ್ರತಿಷ್ಠೆ, ಕಲಾಶಾಭಿಷೇಕ ಹಾಗೂ ವರ್ಷಾವಾಧಿ ನೇಮೋತ್ಸವದ ಪ್ರಯುಕ್ತ ಫೆ.೧೭ರಂದು ಗುರುವಾರ ಸಂಜೆ ೫ ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮನಂದ ಸರಸ್ವತಿ ಸ್ವಾಮೀಜಿ ಶ್ರೀ ರಾಮ ಕ್ಷೇತ್ರ ನಿತ್ಯಾನಂದ ನಗರ ಧರ್ಮಸ್ಥಳ ಇವರು ಆಶೀರ್ವಚನ ನೀಡಿ ಲೋಕ ಸಭಾ ಸದಸ್ಯ ಹಾಗೂ ಬಿ ಜೆ ಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲು, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್, ಮಾಜಿ ಸಚಿವ ಬಿ ರಮಾನಾಥ ರೈ, ಬಂಟ್ವಾಳ ತಹಶೀಲ್ದಾರ್ ರಶ್ಮಿ , ಜೀವನ್ ದಾಸ್ ರೈ ಮಂಗಾಜೆ, ಹರಿಕೃಷ್ಣ ಬಂಟ್ವಾಳ, ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ, ಶರಣ್ ಚಂದ್ರ ಸನಿಲ್, ಯಾದವ ಕೋಟ್ಯಾನ್ ಪೆರ್ಮುದೆ, ಹರೀಶ್ ಕುತ್ತಾರ್, ಶಿವಪ್ಪ ನಂತೂರ್, ಚಂದ್ರಹಾಸ ಕುಲಾಲ್ ಪಲ್ಲಿಪಾಡಿ, ವೆಂಕಟೇಶ್ ನಾವಡ ಪೊಳಲಿ ಮುಂತಾದವರು ಇದ್ದರು.

