ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಮಂಗಾಜೆ ಶ್ರೀ ಕೋರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ಹಾಗೂ ರಾಹು ದೈವಗಳ ಪುನರ್ ಪ್ರತಿಷ್ಠೆ, ಕಲಾಶಾಭಿಷೇಕ ಹಾಗೂ ವರ್ಷಾವಾಧಿನೇಮೋತ್ಸವವು ಫೇ.೧೫ ರಿಂದ ಫೆ.೨೦ರವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಕೋರ್ದಬ್ಬು ದೈವಸ್ಥಾನವು ಸುಮಾರು ೫೦ಲಕ್ಷ ರೂ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡು ಪೊಳಲಿ ವೇದಮೂರ್ತಿ ಡಾ. ವೆಂಕಟೇಶ ತಂತ್ರಿಗಳ ನೇತೃತ್ವದಲ್ಲಿ ಪುನರ್ ಪ್ರತಿಷ್ಠೆ ಹಾಗೂ ಕಲಾಶಾಭಿಷೇಕ ನಡೆಯಲಿದೆ.
ಕೋರ‍್ದಬ್ಬು ದೈವಸ್ಥಾನಕ್ಕೆ ಹೊರೆಕಾಣಿಕೆ:
ಫೆ. ೧೫ರಂದು ಮಂಗಳವಾರ ಸಂಜೆ ೩. ೩೦ ಗಂಟೆಗೆ ಪೊಳಲಿ ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕಾಚೈತನ್ಯಾನಂದ ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.
ಹೊರೆಕಾಣಿಕೆ ಮೆರವಣಿಗೆಯು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ರಾಜಾಂಗಣದಿಂದ ಹೊರಟು ಪುಂಚಮೆ ಮಾರ್ಗವಾಗಿ ದೈವಸ್ಥಾನಕ್ಕೆ ಆಗಮಿಸಲಿದೆ. ಸಂಜೆ ೬ ಕ್ಕೆ ದ. ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಶ್ರೀ ಅ.ನ. ಭ ಪೊಳಲಿ ಇವರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ರಾತ್ರಿ ೭. ಗಂಟೆಯಿಂದ ನಮ್ಮ ಕಲಾವಿದೆರ್ ಬೆದ್ರ ಇವರ ‘ಪಾಂಡುನ ಅಲಕ್ಕ ಪೋಂಡು’ ಎಂಬ ಹಾಸ್ಯ ನಾಟಕ ನಡೆಯಲಿದೆ.
ಫೆ ೧೬ರಂದು ಬುಧವಾರ ಬೆಳಿಗ್ಗೆ ಬಿಂಬ ಶುದ್ದಿ, ಕಲಾಶಭಿಷೇಕ, ಅಧಿವಾಸ ಹೋಮ ನಡೆಯಲಿದೆ. ಸಂಜೆ ಡ್ಯಾನ್ಸ್ ಅಕಾಡೆಮಿ ಎಡಪದವು ಇವರಿಂದ ‘ನೃತ್ಯ ಗಾನವೈಭವ‘ ಹಾಗೂ ರಾಜಶ್ರೀ ಮೋಕೆದ ಕಲಾವಿದೆರ್ ಪೊಳಲಿ ಇವರಿಂದ ‘ಬಂಗಾರ್ ಬಾಬು’ತುಳು ಹಾಸ್ಯ ನಾಟಕ ನಡೆಯಲಿದೆ.
ಫೆ. ೧೭ರಂದು ಗುರುವಾರ ಬೆಳಿಗ್ಗೆ ೮.೪೫ಕ್ಕೆ ಸಪರಿವಾರ ಕೊರ್ದಬ್ಬು ದೈವಗಳ ಪುನರ್ ಪ್ರತಿಷ್ಠೆ, ಕಲಾಶಾಭಿಷೇಕ ನಡೆದು ಶ್ರೀ ದೈವಗಳ ದರ್ಶನ ಸೇವೆ ನಡೆಯಲಿದೆ. ಮಧ್ಯಾಹ್ನ ೧೨.೩೦ಗೆ ಪಲ್ಲಪೂಜೆ ನಡೆದು ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ೫ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮನಂದ ಸರಸ್ವತಿ ಸ್ವಾಮೀಜಿ ಶ್ರೀ ರಾಮ ಕ್ಷೇತ್ರ ನಿತ್ಯಾನಂದ ನಗರ ಧರ್ಮಸ್ಥಳ ಇವರು ಆಶೀರ್ವಚನ ನೀಡಲಿದ್ದಾರೆ, ಲೋಕ ಸಭಾ ಸದಸ್ಯ ಹಾಗೂ ಬಿ ಜೆ ಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲು, ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ, ಮಾಜಿ ಸಚಿವ ಬಿ ರಮಾನಾಥ ರೈ, ಬಂಟ್ವಾಳ ತಹಶೀಲ್ದಾರ್ ರಶ್ಮಿ ಪಾಲ್ಗೊಳ್ಳಲಿದ್ದಾರೆ.
ರಾತ್ರಿ ೯ ಗಂಟೆಯಿಂದ ಕೊರ್ದಬ್ಬು ತನ್ನಿಮಾನಿಗ, ಗುಳಿಗ ಪಂಜುರ್ಲಿ ಹಾಗೂ ರಾಹು ‘ದೈವಗಳ ಗಗ್ಗರ ಸೇವೆ’ ನಡೆಯಲಿದೆ
ತಾ ೧೮ ರಂದು ಶುಕ್ರವಾರ ಸಂಜೆ ೬ ಗಂಟೆಯಿಂದ ರಾತ್ರಿ ೧೧ ಗಂಟೆ ವರೆಗೆ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ‘ಶುಕ್ರನಂದನೆ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.
ತಾ ೧೯ರಂದು ಶನಿವಾರ ರಾತ್ರಿ ೧೦ಗಂಟೆಯಿಂದ ಶ್ರೀ ಕೋರ್ದಬ್ಬು ತನ್ನಿಮಾನಿಗ ದೈವಗಳ ವಾರ್ಷಿಕ ನೇಮೋತ್ಸವ ಹಾಗೂ ತಾ ೨೦ರಂದು ಭಾನುವಾರ ರಾತ್ರಿ ೮ ಗಂಟೆಯಿಂದ ಗುಳಿಗ ಪಂಜುರ್ಲಿ ಮತ್ತು ರಾಹು ದೈವಗಳ ನೇಮೋತ್ಸವ ನಡೆಯಲಿದೆ
