ಅಮ್ಮುಂಜೆ: ವೀರ ಯೋಧ ಯಾದವ ಫ್ರೆಂಡ್ಸ್ (ರಿ) ಅಮ್ಮುಂಜೆ ಹಾಗೂ ವೀರ ಯೋಧ ಯಾದವ ಫ್ರೆಂಡ್ ಮಹಿಳಾ ಘಟಕ ಅಮ್ಮುಂಜೆ ಹಾಗೂ ಅಮ್ಮುಂಜೆ ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಫೆ೦೬ರಂದು ಭಾನುವಾರ ಬೆಳಿಗ್ಗೆ ೯ ಘಂಟೆಗೆ ಅಮ್ಮುಂಜೆ ಗ್ರಾಮದ ಪರಿಸರದ ಸ್ವಚ್ಚತಾ ಕಾರ್ಯಕ್ರಮ ಸ್ವಚ್ಛ ಅಮ್ಮುಂಜೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಅಮ್ಮುಂಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯಾದ ಶ್ರೀಮತಿ ನಯನ ಹಾಗೂ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪ್ರಮೀಳಾ, ಯಾದವ ಫ್ರೆಂಡ್ಸ್ ಇದರ ಅಧ್ಯಕ್ಷರಾದ ಉದಯ.ಕೆ ,ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಚೇತನ ಎಚ್ ರಾವ್,ವಿಜಯಲಕ್ಷ್ಮಿ ಬಲ್ಲಾಳ್,ಹಾಗೂ ಪಂಚಾಯತ್ ಸದಸ್ಯರಾದ ರವಿ ಸುವರ್ಣ, ಕಾರ್ತಿಕ್ ಬಲ್ಲಾಳ ಹಾಗೂ ಭಾಗಿರಧಿ ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಅಬೂಬಕ್ಕರ್,ಜನಾರ್ದನ ಬಾರಿಂಜೆ,ಸತ್ಯಪ್ರಸಾದ್ ಶೆಟ್ಟಿ, ಪ್ರಶಾಂತ್ ಕುಲಾಲ್ ,ನಿಶಾಂತ್ ಅಮ್ಮುಂಜೆ ಹಾಗೂ ಊರ ನಾಗರಿಕರು ,ಸಂಘದ ಸದಸ್ಯರು ಭಾಗವಹಿಸಿದರು.

