ಮುಂಬಯಿ : ಉಡುಪಿ ಜಿಲ್ಲೆಯ ಮಲ್ಪೆ ಇಲ್ಲಿನ ತೊಟ್ಟಂ ಮೂಲತಃ ಸಬಿನಾ ಎ.ಡಿ’ಸೋಜಾ (೮೪.) ಅಲ್ಪ ಕಾಲದ ಅನಾರೋಗ್ಯ ಹಾಗೂ ವಯೋ ಸಹಜ ಅಸ್ವಸ್ಥತೆಯಿಂದ 27ರಂದು ಗುರುವಾರ ಬೆಳಿಗ್ಗೆ ಪುಣೆ ಇಲ್ಲಿನ ಕ್ಯಾಂಪ್ ವಿನ್ಸೆಂಟ್ ಸ್ಟೀಟ್‌ನ ಮಿಯಾಮಿ ಅಪಾರ್ಟ್ಮೆಂಟ್‌ನ ಸ್ವನಿವಾಸದಲ್ಲಿ ನಿಧನರಾದರು.Sabina Dsouza Pune (A)

ಭಾರತೀಯ ಸೇನೆಯಲ್ಲಿ (ಆರ್ಮಿ) ಹಿರಿಯ ಲೆಕ್ಕಿಗ ಆಗಿದ್ದ ಆ್ಯಂಟನಿ (ಸನ್ನಿ) ಡಿ’ಸೋಜಾ ಅವರ ಧರ್ಮಪತ್ನಿಯಾಗಿದ್ದ ಸಬಿನಾ ಡಿ’ಸೋಜಾ ಇವರು ಮಂಗ್ಳೂರಿಯನ್ ಕಥೋಲಿಕ್ ಅಸೋಸಿಯೇಶನ್ (ರಿ.) ಪುಣೆ ಇದರ ಸ್ಥಾಪಕ ಕಾರ್ಯಕಾರಿ ಸಮಿತಿ ಸದಸ್ಯೆ ಆಗಿದ್ದು ಈ ತನಕವೂ ಸಕ್ರೀಯ ಸದಸ್ಯೆಯೂ, ಮಾರ್ಗದರ್ಶಕಿಯೂ ಆಗಿ ಸೇವಾ ನಿರತರಾಗಿದ್ದರು. ನಿಸ್ವಾರ್ಥ ಸಮಾಜ ಸೇವಕಿಯಾಗಿ ಗುರುತಿಸಿ ಕೊಂಡಿದ್ದ ಮೃತರು ಕೊಡುಗೈದಾನಿ ಆಗಿದ್ದು ಎರಡು ಗಂಡು, ಒಂದು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ವಿದೇಶದಲ್ಲಿನ ಮಕ್ಕಳ ಆಗಮನದ ಬಳಿಕ ಮೃತರ ಅಂತ್ಯಕ್ರಿಯೆಯು ಬರುವ ವಾರ (ಫೆ.೦೩ರ ವೇಳೆಗೆ) ಪುಣೆ ಕ್ಯಾಂಪ್‌ನ ಚರ್ಚ್ನಲ್ಲಿ ನೆರವೇರಲಿದೆ ಎಂದು ಆಪ್ತರು ತಿಳಿಸಿದ್ದಾರೆ. ಸಬಿನಾ ನಿಧನಕ್ಕೆ ಮಂಗ್ಳೂರಿಯನ್ ಕಥೋಲಿಕ್ ಅಸೋಸಿಯೇಶನ್‌ನ ಅಧ್ಯಕ್ಷೆ, ಪದಾಧಿಕಾರಿಗಳು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೊಮೆಡಿಕಿಂಗ್ ನಟ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ಪತ್ರಕರ್ತ ರೋನ್ಸ್ ಬಂಟ್ವಾಳ್ ಸಂತಾಪ ವ್ಯಕ್ಯ ಪಡಿಸಿ ಶ್ರದ್ಧಾಂಜಲಿ ಕೋರಿದ್ದಾರೆ.

By suddi9

Leave a Reply

Your email address will not be published. Required fields are marked *