ಕೈಕಂಬ: ಮಂಗಳೂರು ತಾಲೂಕಿನ ಗುರುಪುರ ಕೈಕಂಬದಲ್ಲಿ ದೇವದಾಸ್ ಡಿಪಾರ್ಟಮೆಂಟಲ್ ಜನರಲ್ ಸ್ಟೋರ್ ಉದ್ಯಮವನ್ನು ನಡೆಸಿಕೊಂಡು ಬಂದ ಹಿರಿಯ ಉದ್ಯಮಿ ಶ್ರೀ ದೇವದಾಸ್ ಪೈ (82ವರ್ಷ) ಅಲ್ಪ ಕಾಲದ ಅಸೌಖ್ಯದಿಂದ ಜ.25ರಂದು ಮಂಗಳವಾರ ಕೈಕಂಬದ ಸ್ವಗ್ರಹದಲ್ಲಿ ನಿಧನಹೊಂದಿದರು. ಮೃತರು ಒರ್ವ ಪುತ್ರಿ ಹಾಗೂ ಅಪಾರವರ್ಗದ ಬಂದು ಬಳಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಕೈಕಂಬ ಕಂದಾವರ ಪದವಿನ ಚಿರಶಾಂತಿ ಧಾಮ ಚಿತಾಗಾರದಲ್ಲಿ ನಡೆಯಿತು. 
