ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಂದ ಶ್ರೀ ಕ್ಷೇ.ಧ.ಗ್ರಾಮಾಭಿವೃದ್ಧಿ ಯೋಜನೆಯ ಗ್ರಾಮ ಕಲ್ಯಾಣ ಯೋಜನೆಯಲ್ಲಿ  ನೂತನವಾಗಿ  ನಿರ್ಮಾಣಗೊಳ್ಳುತ್ತಿರುವ ಮಣಿನಾಲ್ಕೂರು ಗ್ರಾಮದ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸರಪಾಡಿ ಇದರ  ಜೀರ್ಣೋದ್ಧಾರ ಕಾರ್ಯಕ್ಕೆ 5 ಲಕ್ಷ ರೂ. ಆರ್ಥಿಕ ಸಹಾಯಧನವನ್ನು ಬುಧವಾರ ಹಸ್ತಾಂತರಿಸಲಾಯಿತು.WhatsApp Image 2022-01-22 at 3.53.30 PMಬಾಚಕೆರೆ ದೇವಸ್ಥಾನ ಬ್ರಹ್ಮಕಲಶೋತ್ಸವ ದ ಸಿದ್ಧತೆಯಲ್ಲಿದ್ದು, ಧರ್ಮಸ್ಥಳದಿಂದ ಸಹಾಯಧನದ ಮಂಜೂರಾತಿ ಪತ್ರವನ್ನು ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದ ಪ್ರಾದೇಶಿಕ  ನಿರ್ದೇಶಕ ಆನಂದ ಸುವರ್ಣ ಅವರು ಬಾಚಕೆರೆ ಕ್ಷೇತ್ರದ ಧರ್ಮದರ್ಶಿ ದೇಜಪ್ಪ ಬಾಚಕೆರೆ ಅವರಲ್ಲಿ ಹಸ್ತಾಂತರಿಸಿದರು.

ಯೋಜನೆಯ ತಾಂತ್ರಿಕ ಯೋಜನಾಧಿಕಾರಿ ಪುಷ್ಪರಾಜ್, ಬಂಟ್ವಾಳ ವಲಯ ಮೇಲ್ವಿಚಾರಕ ಕೇಶವ ಕೇಪು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ, ಜೀರ್ಣೋದ್ಧಾರ ಸಮಿತಿ ಪ್ರ.ಕಾರ್ಯದರ್ಶಿ ಸರಪಾಡಿ ಅಶೋಕ ಶೆಟ್ಟಿ, ಬ್ರಹ್ಮ ಕಲಶ ಸಮಿತಿ ಪದಾಽಕಾರಿಗಳಾದ  ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲ್ ಗುತ್ತು, ಶಿವರಾಮ ಶೆಟ್ಟಿ ದೋಟ, ಚಂದ್ರಹಾಸ ಶೆಟ್ಟಿ ಹೊಳ್ಳರಗುತ್ತು, ಶಾಂತಪ್ಪ ಪೂಜಾರಿ ಹಟದಡ್ಕ, ನಾರಾಯಣ ಬಜ, ಪುರುಷೋತ್ತಮ, ಲೋಕೇಶ್,  ಅರ್ಚಕ ಗಿರಿನಾಥ ಶರ್ಮ, ಸುಂದರ ಬಾಚಕೆರೆ, ನಿರಂಜನ ಬಾಚಕೆರೆ , ಮೋಹಿನಿ ಬಾಚಕೆರೆ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *