ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಡಿ ವೈ ಎಸ್ಪಿ ಕಚೇರಿಯಲ್ಲಿ ನೂತನ ಡಿ ವೈ ಎಸ್ಪಿ ಆಗಿ ಪ್ರತಾಪ್ ಸಿಂಗ್ ಥೋರಟ್ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ಇಲ್ಲಿನ ಡಿ ವೈ ಎಸ್ಪಿ ಶಿವಾಂಶು ರಜಪೂತ್ ಇವರು ಬಡ್ತಿ ತರಬೇತಿಗೆ ತೆರಳಿದ ಹಿನ್ನೆಲೆಯಲ್ಲಿ ಸ್ಥಾನ ತೆರವಾಗಿತ್ತು. ಇವರು ರಾಜ್ಯದ ಸಿಸಿಬಿ ಸಹಿತ ಭಯೋತ್ಪಾದನಾ ನಿಗ್ರಹ ದಳದಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಶಿಸ್ತುಪಾಲನೆ ಮತ್ತು ಶಾಂತಿ ಪಾಲನೆ ಜೊತೆಗೆ ಕಾನೂನು ಪಾಲನೆಗೆ ಮೂಲಕ ಜನತೆಗ ಹತ್ತಿರವಾಗಿರುವ ಜನಸ್ನೇಹಿ ಪೊಲೀಸರಿಗೆ ನಾಗರಿಕರು ಸಹಕರಿಬೇಕು ಎಂದು ಅವರು ತಿಳಿಸಿದ್ದಾರೆ.
