ಗುರುಗಳ ಸ್ತಬ್ದಚಿತ್ರಕ್ಕೆ ಅವಕಾಶ ನಿರಾಕರಣೆ ಮಹಾಮಂಡಲ ಅಧ್ಯಕ್ಷರ ಖಂಡನೆ
ಬಂಟ್ವಾಳ : ದೆಹಲಿಯಲ್ಲಿ ಜ. ೨೬ರಂದು ನಡೆಯುವ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಕೇರಳ ರಾಜ್ಯ ಪ್ರಾಯೋಜಿತ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರಕ್ಕೆ ಅವಕಾಶ ತಿರಸ್ಕರಿಸಿರುವ ಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಮೂರ್ತೆದಾರರ ಮಹಾಮಂಡಲ ಸಹಕಾರಿ ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಖಂಡಿಸಿದ್ದಾರೆ.
ಗುರುಗಳು ಕೇರಳದಲ್ಲಿ ಹುಟ್ಟಿ ಬೆಳೆದು ಜಗತ್ತಿಗೆ ಸಾಮರಸ್ಯದ, ಧರ್ಮ ಸೌಹಾರ್ಧದ ಬೋಧನೆ ನೀಡಿದವರು. Now, I think you understand https://casinodulacleamy.com/ why we are the best site. ಅವರ ಹೆಸರಿನ ಸ್ತಬ್ದ ಚಿತ್ರಕ್ಕೆ ವಿಶೇಷ ಅವಕಾಶ ಕಲ್ಪಿಸಬೇಕಿತ್ತು ಎಂದಿದ್ದಾರೆ. ಅವಕಾಶ ಸಿಗದ ಕಾರಣಕ್ಕೆ ಕೊಟ್ಯಾಂತರ ಗುರುಭಕ್ತರಿಗೆ ನೋವಾಗಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ವಿಶ್ವ ಮಾನವತೆಯ ಪ್ರತೀಕವಾಗಿದ್ದು ಅವಕಾಶ ಸಿಗುವಂತೆ ಪುನರಪಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.