ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು, ಕುಚ್ಚಿಗುಡ್ಡೆ, ಕಾಂಜಿಲಕೋಡಿ, ನೂಯಿ ಮತ್ತು ತಾರಿಕರಿಯ ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಸಮಸ್ಯೆಗೆ ತಕ್ಷಣ ಸ್ಪಂದಿಸದಿದ್ದಲ್ಲಿ ಪಂಚಾಯತ್ ಎದುರು ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಗುರುಪುರ-ಅಡ್ಡೂರು ವಲಯ ಎಚ್ಚರಿಸಿದೆ.gur-jan-13-water-1

ಪಕ್ಷದ ವಲಯ ಪ್ರತಿನಿಧಿ ನಿಯೋಗವೊಂದು ಜ. ೧೩ರಂದು ಪಂಚಾಯತ್ ಪಿಡಿಒ ಅಬೂಬಕ್ಕರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ನಿಯೋಗದಲ್ಲಿ ಬಿಜೆಪಿ ಉತ್ತರ ಮಂಡಲ ಕಾರ್ಯದರ್ಶಿ ಹರೀಶ್ ಬಳ್ಳಿ, ಗುರುಪುರ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಪಂಚಾಯತ್ ಸದಸ್ಯರಾದ ಸಚಿನ್ ಅಡಪ, ಜಿ ಎಂ ಉದಯ ಭಟ್, ನಳಿನಿ ಶೆಟ್ಟಿ, ಶಶಿಕಲಾ, ಛಾಯಾ ಒಳಗೊಂಡಿದ್ದರು.
\

By suddi9

Leave a Reply

Your email address will not be published. Required fields are marked *