ಕೈಕಂಬ: ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡೂರು ಮತ್ತು ಮೂಳೂರು ಗ್ರಾಮಗಳಲ್ಲಿ ಪಂಚಾಯತ್ ವತಿಯಿಂದ ಕಳೆದೆರಡು ದಿನದಿಂದ ಜಾನುವಾರುಗಳಿಗೆ ಕಾಲ, ಬಾಯಿ ಜ್ವರ-ಕಾಯಿಲೆ ತಡೆಗಾಗಿ ರೋಗ ನಿರೋಧಕ ಚುಚ್ಚುಮದ್ದು ನೀಡಿಕೆ ಕಾರ್ಯ ಆರಂಭಗೊಂಡಿದೆ.
ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ ಸೂಚನೆಯಂತೆ ಗಂಜಿಮಠ ಪಶು ಆರೋಗ್ಯ ಕೇಂದ್ರದ ಜಾನುವಾರು ಅಧಿಕಾರಿ ಡಾ. ಪ್ರಸಾದ್ ಶೆಟ್ಟಿ ಅವರ ನೇತೃತ್ವದ ತಂಡವು ಈ ಕಾರ್ಯಕ್ರಮ ನಡೆಸುತ್ತಿದ್ದು, ಗುರುವಾರ ಗುರುಪುರ ಗ್ರಾಮದ ಕಾರಮೊಗರುವಿನ ಜಗದೀಶ ಆಳ್ವ ಹಾಗೂ ಪರಿಸರದ ಇತರರ ಮನೆಯಲ್ಲಿ ಹಸುಗಳಿಗೆ ಚುಚ್ಚುಮದ್ದು ನೀಡಲಾಯಿತು. ವೈದ್ಯರ ಜೊತೆಯಲ್ಲಿ ಸಿಬ್ಬಂದಿ ರಾಜೇಶ್ ಹಾಗೂ ಹೇಮಲತಾ ಇದ್ದರು.
