ಕೈಕಂಬ : ಗುರುಪುರ ಗ್ರಾಮ ಪಂಚಾಯತ್‌ನಲ್ಲಿ ಗುರುವಾರ(ಜ. ೧೩) ಸ್ವಾಮಿ ವಿವೇಕಾನಂದರ ೧೫೯ನೇ ಜನ್ಮ ದಿನಾಚರಣೆ ಹಾಗೂ ‘ಆಜಾದಿ ಕಾ ಅಮೃತ ಮಹೋತ್ಸವ್’ ಪ್ರಯುಕ್ತ ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ‘ಯುವ ಸಪ್ತಾಹ’ ಕಾರ್ಯಕ್ರಮ ಜರುಗಿತು.gur-jan-13-swamy vivikananda

ಸಂಪನ್ಮೂಲ ವ್ಯಕ್ತಿ ಪತ್ರಕರ್ತ ಧನಂಜಯ ಅವರು “ಯುವ ಜನತೆಗೆ ಸ್ಪೂರ್ತಿ ಸ್ವಾಮಿ ವಿವೇಕಾನಂದ” ವಿಷಯದಲ್ಲಿ ಮಾತನಾಡಿ, ವಿವೇಕಾನಂದರ ನುಡಿಯಂತೆ ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಇಂದಿಗೂ ಪ್ರಸ್ತುತ. ಪೋಲಾಗುತ್ತಿರುವ `ಯುವಶಕ್ತಿ’ ತಡೆ ಯುವಶಕ್ತಿಯಿಂದಲೇ ಸಾಧ್ಯ ಎಂದರು. ವಿಕಲಚೇತನ ಇಲಾಖೆಯ ಸಿಬ್ಬಂದಿ ಜಯಪ್ರಕಾಶ್ ಮಾತನಾಡಿ, ವಿಕಲಚೇತನರಿಗೆ ಲಭ್ಯವಿರುವ ಸರ್ಕಾರದ ಯೋಜನೆಗಳ ಮಾಹಿತಿ ನೀಡಿದರು. ಪಂಚಾಯತ್ ಪಿಡಿಒ ಸ್ವಾಗತಿಸಿ ವಂದಿಸಿದರು.gur-jan-13-swamy vivikananda(pdo)

By suddi9

Leave a Reply

Your email address will not be published. Required fields are marked *