ಉಳಾಯಿಬೆಟ್ಟು ಗ್ರಾಮ ಪಂಚಾಯತ್‌ನಲ್ಲಿ ‘ನಮ್ಮ ಗ್ರಾಮ, ನಮ್ಮ ಯೋಜನೆ’ ಗ್ರಾಮಸಭೆ
ಕೈಕಂಬ : ಉಳಾಯಿಬೆಟ್ಟು ಗ್ರಾಮ ಪಂಚಾಯತ್‌ನಲ್ಲಿ ಜ.೧೦ರಂದು ಸೋಮವಾರ ಪಂಚಾಯತ್ ಅಧ್ಯಕ್ಷ ಹರಿಕೇಶ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಗ್ರಾಮದ ಅಭಿವೃದ್ಧಿ ಯೋಜನೆಯಾದ ‘ನಮ್ಮ ಗ್ರಾಮ, ನಮ್ಮ ಯೋಜನೆ’ ಗ್ರಾಮಸಭೆ ನಡೆಯಿತು.
ಪಂಚಾಯತ್ ಪಿಡಿಒ ಅನಿತಾ ಮಾತನಾಡಿ, ನಮ್ಮ ಗ್ರಾಮ ನಮ್ಮ ಯೋಜನೆಯ ಮಾಹಿತಿ ನೀಡುತ್ತ, ಗ್ರಾಮದಲ್ಲಿ ಬಾಕಿ ಉಳಿದಿರುವ ಹಾಗೂ ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕೆಲಸಕಾರ್ಯಗಳ ಬಗ್ಗೆ ಬೇಡಿಕೆ ಸಲ್ಲಿಸಲು ಸೂಚಿಸಿದರು.
ಅಧ್ಯಕ್ಷ ಹರಿಕೇಶ್ ಮಾತನಾಡಿ, ಗ್ರಾಮದ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಗ್ರಾಮಕ್ಕೆ ಅಗತ್ಯವಿರುವ ಘನತ್ಯಾಜ್ಯ ಘಟಕ ನಿರ್ಮಾಣ ಆಗುತ್ತಿದ್ದು, ಗ್ರಾಮಸ್ಥರ ಸಹಕಾರ ಅತ್ಯಗತ್ಯ ಎಂದರು.
ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ರತ್ನಾ ಎಸ್, ಸದಸ್ಯರಾದ ದಿನೇಶ್ ಕುಮಾರ್, ಮೊಹಮ್ಮದ್ ಅಝರುದ್ಧಿನ್, ವಿಶ್ವನಾಥ ಶೆಟ್ಟಿ, ಸೈನಾಝ್, ಆರೋಗ್ಯ ಸಹಾಯಕಿ ನಿಖಿತಾ, ಪೊಲೀಸ್ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.