ಕೈಕಂಬ: ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ದೊಡ್ಡಳಿಕೆ ಆಣೆಕಟ್ಟಿನಿಂದ ಹೆಚ್ಚು ನೀರು ಹರಿದ ಪರಿಣಾಮ ಕುಲವೂರು, ಮುತ್ತೂರು ಮತ್ತು ನೋಣಾಲು ಪ್ರದೇಶದ ಕೃಷಿ ಭೂಮಿಗೆ ನೀರು ಹರಿಯುವ ನಾಲೆಯ ದಂಡೆ ಒಡೆದು ಹಾನಿಯಾಗಿದೆ.ದೊಡ್ಡಳಿಕೆ ಎಂಬಲ್ಲಿ ನಿರ್ಮಿಸಲಾಗಿರುವ ಹೊಸ ಆಣೆಕಟ್ಟೆಯಲ್ಲಿ ಈ ಬಾರಿ ಗೇಟ್ ಗಳನ್ನು ಬಂದ್ ಮಾಡಿ ನೀರು ಸಂಗ್ರಹಿಸಲಾಗಿದ್ದು ಇಲ್ಲಿಂದ ಕುಲವೂರು ಮುತ್ತೂರಿಗೆ ನಾಲೆಯಲ್ಲಿ ನೀರು ಬಿಡಲಾಗಿತ್ತು,

ಇರುವೈಲು, ಪುಚ್ಚಮೊಗರು ಎಂಬಲ್ಲಿರುವ ವಿದ್ಯುತ್ ಉತ್ಪಾದಣಾ ಘಟಕದ ಆಣೆಕಟ್ಟೆಯಿಂದ ಯಾವುದೇ ಪೂರ್ವ ಮಾಹಿತಿ ಇಲ್ಲದೇ ಹೆಚ್ಚುವರಿ ನೀರನ್ನು ನದಿಗೆ ಹರಿಯಬಿಟ್ಟ ಕಾರಣ ದೊಡ್ಡಳಿಕೆ ಆಣೆಕಟ್ಟೆಯಿಂದ ಮುತ್ತೂರು ನಾಲೆಗೆ ಹೆಚ್ಚು ನೀರು ಹರಿದು ಆಣೆಕಟ್ಟೆಯಿಂದ ಅಂದಾಜು ೩೦೦ ಮೀಟರ್ ಕೆಲಭಾಗದಲ್ಲಿ ನಾಲೆಯ ದಂಡೆ ಒಡೆದು ಹೋಗಿದ್ದು ನೀರು ಮತ್ತೆ ನದಿಗೆ ಸೇರುತ್ತಿದೆ. ನಾಲೆಯ ದಂಡೆ ಒಡೆದ ಪರಿಣಾಮ ಇದೀಗ ದಂಡೆಯ ದುರಸ್ಥಿಗೆ ಲಕ್ಷಾಂತರ ರೂಪಾಯಿ ಖರ್ಚಾಗಲಿದೆ ಅಲ್ಲದೇ ಕುಲವೂರು ಮತ್ತು ಮುತ್ತೂರಿನ ಕೃಷಿ ಭೂಮಿಗೆ ನೀರು ಸರಬರಾಜು ಸ್ಥಗಿತಗೊಂಡಿದೆ. ನಾಲೆಯ ದಂಡೆ ಕುಸಿತಗೊಂಡ ಸ್ಥಳದಲ್ಲಿ ನೀರಿನ ಒತ್ತಡಕ್ಕೆ ಇನ್ನಷ್ಟು ದಂಡೆ ಕುಸಿತಗೊಲ್ಲುವ ಭೀತಿ ಎದುರಾಗಿದೆ.
*ದೊಡ್ಡಳಿಕೆ ಆಣೆಕಟ್ಟೆಯ ಮೆಲ್ಭಾಗದ ಇರುವೈಲು, ಪುಚ್ಛೆಮೊಗರು ಎಂಬಲ್ಲಿಯ ಆಣೆಕಟ್ಟೆಯಿಂದ ಯಾವುದೇ ಮಾಹಿತಿ ನೀಡದೆ ಎಕಾಏಕಿ ನೀರು ಬಿಟ್ಟ ಪರಿಣಾಮ ಹೆಚ್ಚು ನೀರು ನಾಲೆಯಲ್ಲಿ ಹರಿದು ದಂಡೆ ಒಡೆದು ಹೋಗಿದೆ,ದೊಡ್ಡಳಿಕೆ ಆಣೆಕಟ್ಟೆಯಲ್ಲಿ ನಿಗಾವಹಿಸಲು ಸಿಬ್ಬಂದಿ ಇಲ್ಲ ಇಲ್ಲಿ ಆಣೆಕಟ್ಟೆಯ ನೀರು ನಿರ್ವಹಣೆಗೆ ಸಿಬ್ಬಂದಿ ನೇಮಕ ಮಾಡಬೇಕಾಗಿದೆ ಮತ್ತು ಸಣ್ಣ ನೀರಾವರಿ ಇಲಾಖೆ ಒಡೆದು ಹೋಗಿರುವ ನಾಲೆಯ ದಂಡೆಯನ್ನು ತುರ್ತಾಗಿ ದುರಸ್ಥಿ ಮಾಡಿಸಿ ರೈತರ ಕೃಷಿ ಭೂಮಿಗೆ ನೀರು ಹರಿಯಲು ಅನುಕೂಲ ಮಾಡಿಕೊಡಬೇಕು:-
ವಿಜಯಕುಮಾರ್ ಶೆಟ್ಟಿ, ಕುಲವೂರು. ಅಧ್ಯಕ್ಷ ದೊಡ್ಡಳಿಕೆ-ನೋಣಾಲು ಕೃಷಿ ನೀರಾವರಿ ನಾಲೆಯ ನಿರ್ವಹಣಾ ಸಮಿತಿ.
