ಪೊಳಲಿ: ಆಸರೆ ಸೇವಾ ಫೌಂಡೇಶನ್ ವತಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಮುಖದ್ವಾರದಿಂದ ಪುಂಚಮೆ ಜಂಕ್ಷನ್ ತನಕ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.
ಸ್ವಚ್ಚತಾ ಕಾರ್ಯದಲ್ಲಿ ಕರಿಯಂಗಳ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಆಸರೆ ಸೇವಾ ಫೌಂಡೇಶನ್ ಇದರ ಸಂಸ್ಥಾಪಕ ಚಂದ್ರಹಾಸ ಪಲ್ಲಿಪಾಡಿ , ರೋಶನ್ ಪುಂಚಮೆ, ಉಮೇಶ್ ಆಚಾರ್ಯ,ಪ್ರಶಾಂತ್ ವಿಮಲಕೋಡಿ, ಲೋಕೇಶ್ ಪಲ್ಲಿಪಾಡಿ, ಲಕ್ಷ್ಮೀಶ್ ಶೆಟ್ಟಿ, ಪ್ರೇಮನಾಥ್ ಚೇರಾ ಹಾಗೂ ಆಸರೆ ಫೌಂಡೇಶನ್ ಇದರ ಸದಸ್ಯರು ಸ್ವಯಂ ಪ್ರೇರಿತರಾಗಿ ಭಾಗವಹಿಸಿದ್ದರು.

