ಬಂಟ್ವಾಳ: ಹೊಂಡಗಳಿಂದ ತುಂಬಿ ಹೋಗಿದ್ದ ಬಿ.ಸಿ.ರೋಡಿನ ಸವರ್ಿಸ್ ರಸ್ತೆ ಹೊಂಡ ಮುಕ್ತವಾಗಿದೆ. ಕೊನೆಗೂ ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೆರೆ ಗಾತ್ರದಲ್ಲಿದ್ದ ಹೊಂಡಗಳಿಗೆ ಶುಕ್ರವಾರ ಜಲ್ಲಿ ಮಿಶ್ರಣವನ್ನು ಹಾಕಿ ವಾಹನ ಚಾಲಕರು ಹಾಗೂ ಪ್ರಯಾಣಿಕರು ಹೊಂಡಗಳಿಂದಾಗಿ ಅನುಭವಿಸುತ್ತಿದ್ದ ಸಮಸ್ಯೆಯಿಂದ ಪಾರು ಗೊಳಿಸಿದೆ.

DSC_6384

DSC_6385
ಎರಡು ವರ್ಷಗಳ ಹಿಂದೆಯಷ್ಟೇ ನಿಮರ್ಾಣಗೊಂಡ ಬಿ.ಸಿ.ರೋಡಿನ ಸವರ್ಿಸ್ ರಸ್ತೆ ಕಳಪೆ ಕಾಮಾಗಾರಿಯಿಂದಾಗಿ ರಸ್ತೆಯುದ್ದಕ್ಕೂ ಅಲ್ಲಲ್ಲಿ ಹೊಂಡಗಳು ನಿಮರ್ಾಣಗೊಂಡು ವಾಹನ ಸವಾರರು ಸಂಚರಾದ ವೇಳೆ ಪ್ರಯಾಸ ಪಡುವಂತೆ ಮಾಡಿತ್ತು. ಯಾವಾಗ ವಾಹನಗಳು ಅಡ್ಡ ಬೀಳುತ್ತದೋ ಎನ್ನುವಷ್ಟರ ಮಟ್ಟಿಗೆ ಆಳವಾದ ಹೊಂಡಗಳು ರಸ್ತೆಯಲ್ಲಿ ಉದ್ಭವವಾಗಿತ್ತು. ಇದರಿಂದಾಂಗಿ ಪ್ರಾಣ ಭಯದಲ್ಲಿ ಪ್ರಯಾಣಿಕರು ಸಂಚರಿಸ ಬೇಕಾದ ಪರಿಸ್ಥಿತಿ ನಿಮರ್ಾಣಗೊಂಡಿತ್ತು.
ಹೊಂಡಗಳು ದಿನದಿಂದ ದಿನಕ್ಕೆ ತಮ್ಮ ಗಾತ್ರವನ್ನು ಹಿಗ್ಗಿಸಿಕೊಂಡು ಕೆರೆ, ಬಾವಿಯಂತೆ ತನ್ನ ಆಳವನ್ನು ವಿಸ್ತರಿಸಿಕೊಳ್ಳುತ್ತಿದ್ದರೂ ರಸ್ತೆಯ ನಿರ್ವಹಣೆಯ ಜವಬ್ದಾರಿ ಹೊತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ಇದ್ಯಾವುದರ ಪರಿವೆಯೇ ಇಲ್ಲದೆ ಕಂಬಳಿ ಹೊದ್ದು ಮಲಗಿತ್ತು. ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿದರ್ೇಶಕ ಮಳೆಗಾಲ ಮುಗಿಯುತ್ತಿದ್ದಂತೆ ಸವರ್ಿಸ್ ರಸ್ತೆಯ ದುರಸ್ತಿ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದರು. ಅದರಂತೆ ತಕ್ಷಣ ಸ್ಪಂದನೆ ನೀಡಿರುವ ರಾ.ಹೆದ್ದಾರಿ ಪ್ರಾಧಿಕಾರ ಸವರ್ಿಸ್ ರಸ್ತೆಯನ್ನು ಜೆಸಿಬಿ ಮೂಲಕ ದುರಸ್ತಿಗೊಳಿಸುತ್ತಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ 75ರ ಅಲ್ಲಲ್ಲಿ ಬಿದ್ದಿರುವ ಹೊಂಡಗಳನ್ನು ಮುಚ್ಚುವ ಕೆಲಸವನ್ನು ರಾ.ಹೆದ್ದಾರಿ ಪ್ರಾಧಿಕಾರ ಕೈಗೊಂಡಿದೆ.

By suddi9

Leave a Reply

Your email address will not be published. Required fields are marked *