ಬಂಟ್ವಾಳ : ಬ್ಲಾಕ್ ಕಾಂಗ್ರೆಸ್‌ನ ಕಾವಳಪಡೂರು ಪಂಚಾಯತ್‌ಗೆ ಒಳಪಟ್ಟ ಬೂತ್ ಅಧ್ಯಕ್ಷರ ಮನೆ ಮನೆ ಭೇಟಿ “ನಮ್ಮ ನಡೆ ಬೂತ್ ಕಡೆ” ಕಾರ್ಯಕ್ರಮವು ಮಾಜಿ ಸಚಿವ ಬಿ ರಮಾನಾಥ ರೈಯವರ ಮಾರ್ಗದರ್ಶನದಲ್ಲಿ ಡಿ30ರಂದು ಗುರುವಾರ ಬೂತ್ ಅಧ್ಯಕ್ಷರ ನಿವಾಸದಲ್ಲಿ ತೆಂಗಿನ ಸಸಿಯನ್ನು ನೆಡುವ ಮಖಾಂತರ “ಕಾಂಗ್ರೆಸ್ ಪಕ್ಷ ಕಲ್ಪವೃಕ್ಷ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಜ್ಯದ ಬಿಜೆಪಿ ಸರ್ಕಾರ ಬ್ರಷ್ಟಾಚಾರದಲ್ಲಿ ಮುಳುಗಿದ್ದು ಜನರ ಕಷ್ಟಗಳಿಗೆ ಸ್ಪಂದಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಮುಂದಿನ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಮತ್ತು ವಿಧಾನಸಭಾ ಚುನಾವಣೆಗೆ ಮನೆ ಮನೆಗೆ ಭೇಟಿ ನೀಡಿ ಪಕ್ಷವನ್ನು ಸಜ್ಜುಗೊಳಿಸುವಂತೆ ಕರೆ ನೀಡಿದರು. ನ
ನ್ನನ್ನು ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ೬ ಬಾರಿ ಶಾಸಕರನ್ನಾಗಿ ಮತ್ತು ೩ ಬಾರಿ ಸಚಿವರನ್ನಾಗಿ ಮಾಡಿದ ಕ್ಷೇತ್ರದ ಜನತೆಯ ಮತ್ತು ಪಕ್ಷದ ಋಣ ನನ್ನ ಮೇಲೆ ಇದೆ ಅದನ್ನು ಜನ್ಮ ಜನ್ಮಾಂತರದಲ್ಲೂ ಮರೆಯಲು ಅಸಾಧ್ಯವಾಗಿದ್ದು ಮುಂದಿನ ದಿನಗಳಲ್ಲಿ ಪಕ್ಷವು ನನಗೆ ಅವಕಾಶ ಮಾಡಿಕೊಟ್ಟಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ಹಿಂದೆ ಮಾಡಿದ ಅಭಿವೃದ್ಧಿ ಕೆಲಸಕ್ಕಿಂತ ಹೆಚ್ಚು ಅಭಿವೃದ್ಧಿ ಹಾಗೂ ನಿಮ್ಮ ಸೇವೆ ಮಾಡಲು ನಾನು ಸದಾ ಸಿದ್ಧನಾಗಿದ್ದೇನೆ ಎಂದು ಮಾರ್ಮಿಕವಾಗಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡಿ ದಕ್ಷ ಹಾಗೂ ಪ್ರಾಮಾಣಿಕತೆಯಿಂದ ಕ್ಷೇತ್ರದ ಮತದಾರರ ಗೌರವಕ್ಕೆ ಚ್ಯುತಿ ಬಾರದ ನಡವಳಿಕೆಯಿಂದ ಮತದಾರರು ಹೆಮ್ಮೆ ಪಡುವಂತಾಗಿದೆ ಎಂದರು. ಬೂತ್ ಅಧ್ಯಕ್ಷರು ಹಾಗೂ ಇತರ ಸಮಿತಿ ಸದಸ್ಯರು ಮತದಾರ ಪಟ್ಟಿಯನ್ನು ಪರಿಷ್ಕರಿಸಿ ಪ್ರತಿ ಬೂತಿನಲ್ಲಿ ಹೆಚ್ಚು ಹೊಸ ಮತದಾರರನ್ನು ಸೇರ್ಪಡೆಗೊಳಿಸುವಲ್ಲಿ ಪ್ರಯತ್ನಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಜಗದೀಶ್ ಕೊಯಿಲ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಪೂಜಾರಿ ಜೋರಾ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಕರ್ಣ, ಬೂತ್ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ ಪೂಜಾರಿ, ಮಹಮ್ಮದ್ ಶರೀಫ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಧನಲಕ್ಷ್ಮಿ ಬಂಗೇರಾ, ಪಂಚಾಯತ್ ಅಧ್ಯಕ್ಷರಾದ ರಜನಿ ಬಾಬು ಮೂಲ್ಯ, ಪಂಚಾಯತ್ ಸದಸ್ಯರಾದ ಶೋಮರ್ ಲೋಬೋ, ಸುರೇಶ್ ಪೂಜಾರಿ, ಲಕ್ಷ್ಮಿ ನಾರಾಯಣ ಶರ್ಮ, ಶಫಿಯಾ, ಪುಷ್ಪ, ಲೀನಾ ರೋಡ್ರಿಗಸ್, ಅಬ್ದುಲ್ ರಝಾಕ್, ಮುಖಂಡರಾದ ಪದ್ಮನಾಭ ಪೂಜಾರಿ, ಇಕ್ಬಾಲ್, ಪ್ರಭಾಕರ್ ಅಮೀನ್, ಬಶೀರ್, ಜಯಮಾಲ, ಅಶ್ರಫ್, ಮಹಮ್ಮದ್ ಹನೀಫ್, ಮಮತಾ ಪೂಜಾರಿ, ಅಬ್ದುಲ್ ರಹಿಮಾನ್, ಅಬ್ದುಲ್ ಮಜೀದ್ ಉಪಸ್ಥಿತರಿದ್ದರು.
