ಬಂಟ್ವಾಳ : ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾವಳಮೂಡೂರು ಗ್ರಾಮ ಪಂಚಾಯತ್‌ಗೊಳಪಟ್ಟ ಬೂತ್ ಅಧ್ಯಕ್ಷರ ಮನೆ ಮನೆ ಭೇಟಿ “ನಮ್ಮ ನಡೆ ಬೂತ್ ಕಡೆ” ಕಾರ್ಯಕ್ರಮವು ಡಿ.26ರಂದು ಭಾನುವಾರ ನಡೆಯಿತು. ಮಾಜಿ ಸಚಿವ ಬಿ ರಮಾನಾಥ ರೈಯವರ ನೇತೃತ್ವದಲ್ಲಿ ಬೂತ್ ಅಧ್ಯಕ್ಷರ ನಿವಾಸದಲ್ಲಿ ತೆಂಗಿನ ಸಸಿಯನ್ನು ನೆಡುವ ಮುಖಾಂತರ “ಕಾಂಗ್ರೆಸ್ ಪಕ್ಷ ಕಲ್ಪವೃಕ್ಷ” ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.WhatsApp Image 2021-12-30 at 3.11.14 AM

ನಮ್ಮ ಪಕ್ಷದ ಸಿದ್ಧಾಂತದಂತೆ ತನ್ನ ಧರ್ಮವನ್ನು ಕಾಪಾಡುವ ಜೊತೆಗೆ ಇತರ ಧರ್ಮವನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕಾರ್ಯಕರ್ತರಲ್ಲಿ ಉಲ್ಲೇಖಿಸಿದರು. ಅದೇ ರೀತಿ ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಮತ್ತು ವಿಧಾನಸಭೆ ಚುನಾವಣೆಗೆ ಕಾರ್ಯಕರ್ತರು ಹುಮ್ಮಸ್ಸಿನಿಂದ ಕಾರ್ಯಪ್ರವೃತಗೊಳ್ಳುವಂತೆ ಕರೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬೇಬಿ ಕುಂದರ್ ಮಾತನಾಡಿ ಸ್ಥಳೀಯ ಗ್ರಾಮ ಪಂಚಾಯತಿಯ ವೈಫಲ್ಯತೆಯನ್ನು ಮನೆ ಮನೆಗೆ ತಲುಪಿಸುವಲ್ಲಿ ಕಾರ್ಯಕರ್ತರು ಹೆಚ್ಚು ಆಸಕ್ತಿ ವಹಿಸುವಂತೆ ಕರೆ ನೀಡಿದರು.

ಪಕ್ಷದಲ್ಲಿ ಯಾವದೇ ರೀತಿಯ ಶಿಸ್ತು ಉಲ್ಲಂಘನೆಯಾಗದಂತೆ ಕಾರ್ಯಕರ್ತರು ಎಚ್ಚರ ವಹಿಸುವಂತೆ ಮನವಿ ಮಾಡಿದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಧಾಕರ್ ಶೆಣೈ, ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಸದಾನಂದ ಶೆಟ್ಟಿ, ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಪೂಜಾರಿ ಜೋರ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಬಿ ಆರ್ ಅಂಚನ್, ಬೂತ್ ಸಂಖ್ಯೆ ೮೦ರ ಅಧ್ಯಕ್ಷರಾದ ಮಹಮ್ಮದ್ ಸಾಲಿಯಾ, ಪಂಚಾಯತ್ ಸದಸ್ಯರಾದ ಖಲೀಲ್ ಎನ್.ಸಿ.ರೋಡ್, ಜಯಂತಿ ಕೈಲಾರ್, ಮುಖಂಡರಾದ ಶರಫತ್ ಅಂಜುಮ್, ಇಸ್ಮಾಯಿಲ್ ಸಿದ್ಧಿಕ್, ಚಂಪಾ ಸುರೇಶ್, ಶಬನಾ, ಉಮ್ಮರ್ ಶರೀಫ್, ಜನಾರ್ಧನ ಆಚಾರ್ಯ, ಅಬ್ದುಲ್ ಗಫೂರ್, ಪ್ರಭಾಕರ ಆಚಾರ್ಯ, ಮಹಮ್ಮದ್ ಹನೀಫ್, ಉಮೇಶ್ ಕೈಲಾರ್, ಷಣ್ಮುಖ ಕೈಲಾರ್, ಶರೀಫ್ ಕಾವಳಕಟ್ಟೆ, ಹಪೀಝ್ ಅಬ್ರಾರ್ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *