ಪೊಳಲಿ: ಶ್ರೀ ಅಶ್ವಥನಾರಾಯಣ ಸೇವಾಸಮಿತಿ ಗುಂಡಿಗುಮೇರ್ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ನೂತನ ಭಜನಾ ಮಂದಿರ ಫೆ.20ರಂದು ಭಾನುವಾರ ಲೋಕಾರ್ಪಣೆ ಗೊಳ್ಳಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಜ.೦೪ರಂದು ಮಂಗಳವಾರ ಬಿಡುಗಡೆಗೊಳಿಸಲಾಯಿತು. ಪೊಳಲಿ ದೇವಳದ ಪ್ರಧಾನ ಅರ್ಚಕ ಮಾಧವ ಭಟ್, ಕೆ. ರಾಮ್ ಭಟ್, ಯಶವಂತ ಕೋಟ್ಯಾನ್ ಪೊಳಲಿ, ರಾಜ್ ಕೋಟ್ಯಾನ್ ಗರೋಡಿ, ರೋಶನ್ ಅಮೀನ್ ಪುಂಚಮೆ, ಅಧ್ಯಕ್ಷರು ಉಮೇಶ್ ವಿ ಪೂಜಾರಿ ಹಾಗೂ ನಿರಂಜನ್ ಕಾರ್ಯದರ್ಶಿ ಉಪಸ್ಥಿತರಿದ್ದರು.
