ಪೊಳಲಿ : ಅಮ್ಮುಂಜೆ ಗುತ್ತು ಶ್ರೀ ಸೋಮನಾಥೇಶ್ವರ ಬಾಲಾಲಾಯಾದಲ್ಲಿ ಶ್ರೀ ಸೋಮನಾಥೇಶ್ವರ ದೇವರ ಪ್ರತಿಷ್ಠಾ ಕಲಾಶೋತ್ಸವ, ಪ್ರತಿಷ್ಠಾ ಪೂಜೆ ಹಾಗೂ ಸರ್ವ ಪೂಜಾ ಕೈಂಕರ್ಯ ಪೊಳಲಿ ಶ್ರೀ ಸುಬ್ರಮಣ್ಯ ತಂತ್ರಿಗಳ ನೇತೃತ್ವದಲ್ಲಿ ಡಿ.29ರಂದು ಬುಧವಾರ ಸಂಪನ್ನಗೊಂಡಿತು.
ಅಮ್ಮುಂಜೆ ಗುತ್ತು ಡಾಕ್ಟರ್ ಮಂಜಯ್ಯ ಶೆಟ್ಟಿ, ಅಮ್ಮುಂಜೆ ಗುತ್ತು ರವೀಂದ್ರ ಶೆಟ್ಟಿ, ಸಂತೋಷ್ ಶೆಟ್ಟಿ, ವಿನೋದ್ ನಾಯ್ಕ್, ರಂಗನಾಥ್ ಶೆಟ್ಟಿ, ಶಿವ ರಾಮ್ ಶೆಟ್ಟಿ, ಸಂಪತ್ ಕುಮಾರ್ ಶೆಟ್ಟಿ, ರಾಮಕೃಷ್ಣ ಶೆಟ್ಟಿ, ದೇವದಾಸ್ ಹೆಗ್ಡೆ, ಸುಂದರ ಭಂಡಾರಿ, ರಮೇಶ್ ಭಂಡಾರಿ, ಶ್ರೀಮತಿ ಯಶೋಧಾ ಶೆಟ್ಟಿ, ಶ್ರೀಮತಿ ಪ್ರಫುಲ್ಲ ಶೆಟ್ಟಿ, ಶ್ರೀಮತಿ ಶಶಿಕಲಾ ಶೆಟ್ಟಿ, ಡಾಕ್ಟರ್ ರಮೇಶ್ ಮಲ್ಲಿ ಹಾಗೂ ಅಮ್ಮುಂಜೆ ಗುತ್ತು ಸರ್ವ ಕುಟುಂಬಿಕರು ಹಾಗೂ ಊರ ಭಕ್ತರು ಉಪಸ್ಥಿತರಿದ್ದರು. ಮಾಜಿ ಸಚಿವ ಬಿ ನಾಗರಾಜ್ ಶೆಟ್ಟಿ ಆಗಮಿಸಿ ಶುಭ ಹಾರೈಸಿದರು.




