ಬಂಟ್ವಾಳ: ತಾಲ್ಲೂಕಿನ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನ ಬಳಿ ಕುಟ್ಟಿಕಳ ಶ್ರೀ ಶನಿಪೂಜಾ ಸೇವಾ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ೧೮ನೇ ವರ್ಷದ ‘ಸಾರ್ವಜನಿಕ ಶ್ರೀ ಶನಿ ಪೂಜೆ’ ಧಾರ್ಮಿಕ ಸಭೆಯಲ್ಲಿ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮಾತನಾಡಿದರು.
ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಅವಿರತ ದುಡಿಮೆಯ ಜೊತೆಗೆ ದೇವರ ಆರಾಧನೆಯಿಂದ ನೆಮ್ಮದಿಯ ಜೀವನ ನಡೆಸುವ ಮೂಲಕ ಎದುರಾಗುವ ವಿವಿಧ ಸಂಕಷ್ಟಗಳಿಂದ ಪಾರಾಗಲು ಸಾದ್ಯವಿದೆ ಎಂದು ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಹೇಳಿದ್ದಾರೆ.
ಇಲ್ಲಿನ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನ ಬಳಿ ಕುಟ್ಟಿಕಳ ಶ್ರೀ ಶನಿಪೂಜಾ ಸೇವಾ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ೧೮ನೇ ವರ್ಷದ ‘ಸಾರ್ವಜನಿಕ ಶ್ರೀ ಶನಿ ಪೂಜೆ’ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಅರಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀಧರ ಶೆಟ್ಟಿ ಮದ್ಯಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಕರ್ತವ್ಯ ಮಾಡುವುದೇ ನಿಜವಾದ ದೇವರ ಆರಾಧನೆಯಾಗುತ್ತದೆ ಎಂದರು.
ಅಮ್ಟಾಡಿ ಅಣ್ಣಪ್ಪ ಪಂಜುರ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರ ರವಿಶಂಕರ ಶೆಟ್ಟಿ ಬಡಾಜೆಗುತ್ತು ಶುಭ ಹಾರೈಸಿದರು. ರಾಯಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ಹಿಂದೂ ಧರ್ಮೋತ್ಥಾನ ವೇದಿಕೆ ಅಧ್ಯಕ್ಷ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು, ಸಿದ್ಧಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಗುತ್ತಿಗೆದಾರ ರಾಜೇಶ ಗೋವಿಂದಬೆಟ್ಟ, ರಂಜನ್ ಕುಮಾರ್ ಶೆಟ್ಟಿ ಅರಳ, ಬಿಜೆಪಿ ಮುಖಂಡ ಡೊಂಬಯ ಬಿ.ಅರಳ, ಸಮಿತಿ ಅಧ್ಯಕ್ಷ ಜಗದೀಶ ಶೆಟ್ಟಿ ಮಾವಂತೂರು, ಗೌರವಾಧ್ಯಕ್ಷ ಉಮೇಶ ಡಿ.ಎಂ., ಮಾಜಿ ಅಧ್ಯಕ್ಷ ಜನಾರ್ಧನ ಹಿರ್ಣಿ, ಚಂದ್ರಹಾಸ ಬಂಗೇರ, ತುಂಗಮ್ಮ, ಸರಸ್ವತಿ ಆಳ್ವ, ದೇವಪ್ಪ ಕುಟ್ಟಿಕಳ, ಪದ್ಮನಾಭ ಪೂಜಾರಿ, ರತ್ನಾಕರ ನಾಯ್ಕ್ ಮತ್ತಿತರರು ಇದ್ದರು.
ಇದೇ ವೇಳೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಭೇಟಿ ನೀಡಿದರು. ಶಿಕ್ಷಕಿ ಸುಜಾತ ಸ್ವಾಗತಿಸಿ, ಪ್ರಜ್ವಲ್ ಸಿದ್ಧಕಟ್ಟೆ ಕಾರ್ಯಕ್ರಮ ನಿರೂಪಿಸಿದರು.
