ಬಂಟ್ವಾಳ: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿದರು. ಬಂಟ್ವಾಳ ತಾಲ್ಲೂಕಿನ ೧೭ ಗ್ರಾಮಗಳ ಕೃಷಿ ಜಮೀನಿನಲ್ಲಿ ಉಡುಪಿಯಿಂದ ಕೇರಳಕ್ಕೆ ಹಾದು ಹೋಗುವ ೪೦೦ ಕೆವಿ ವಿದ್ಯುತ್ ಪ್ರಸರಣ ಯೋಜನೆ ವಿರುದ್ಧ ಇದೇ ೨೮ರಂದು ಪ್ರತಿಭಟನಾ ಸಭೆ ನಡೆಸುವ ಬಗ್ಗೆ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ತಿಳಿಸಿದ್ದಾರೆ.
ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಇಲ್ಲಿನ ಜಕ್ರಿಬೆಟ್ಟುವಿನಲ್ಲಿ ಈ ಪ್ರತಿಭಟನಾ ಸಭೆ ಆಯೋಜಿಸಲಾಗಿದ್ದು, ಕೃಷಿಕರು ಮತ್ತು ಸಂತ್ರಸ್ತರು ಸಹಿತ ಪಕ್ಷದ ಕಾರ್ಯಕರ್ತರು ಭಾಗವಹಿಸುವರು ಎಂದರು. ಇದೇ ವೇಳೆ ಪಕ್ಷದ ಸದಸ್ಯತ್ವ ನೋಂದಣಿ ಕಾರ್ಯಕ್ರಮದಲ್ಲಿ ಕಾರ್ಯಕರ್ತರರು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಪದ್ಮಶೇಖರ್ ಜೈನ್, ಪುರಸಭಾ ಸದಸ್ಯರಾದ ಜನಾರ್ಧನ ಚೆಂಡ್ತಿಮಾರ್, ವಾಸು ಪೂಜಾರಿ ಲೊರೆಟ್ಟೋ, ಪ್ರಮುಖರಾದ ಜಗದೀಶ್ ಕೊಯಿಲ, ಮಾಣಿಕ್ಯರಾಜ್ ಜೈನ್, ಸುಧಾಕರ್ ಶೆಣೈ, ಮಹಾಬಲ ಬಂಗೇರಾ, ದಿನೇಶ್ ಸುಂದರ್ ಶಾಂತಿ, ರಿಚಾರ್ಡ್ ಮಿನೇಜಸ್, ವಸಂತ ಪೂಜಾರಿ ಕಜೆಕಾರು, ತಿಮ್ಮಪ್ಪ ಪೂಜಾರಿ, ಮಹಮ್ಮದ್ ಶರೀಫ್, ಸದಾನಂದ ಶೆಟ್ಟಿ, ಮನೋಹರ್ ನೇರಂಬೋಳ್, ಸುರೇಶ್ ಪೂಜಾರಿ ಜೋರಾ, ಲವೀನಾ ವಿಲ್ಮಾ ಮೊರಾಸ್, ದಿನೇಶ್ ಶೆಟ್ಟಿಗಾರ್, ಸೀತಾರಾಮ್ ಶಾಂತಿ, ಬಾಲಾಜಿ ವಿ ರಾವ್, ಜಯ ಬಂಗೇರಾ, ಆದಂ ಕುಂಞ, ಬಿ ಆರ್ ಅಂಚನ್, ನವೀನ್‌ಚಂದ್ರ ಶೆಟ್ಟಿ, ದೇವಪ್ಪ ಕುಲಾಲ್, ಗಣೇಶ್ ನಾಯಕ್, ವಲೇರಿಯನ್ ಪಿಂಟೋ, ವೆಂಕಪ್ಪ ಪೂಜಾರಿ, ಎಸ್.ಎ. ಹಮೀದ್, ಶಬೀರ್ ಅಹ್ಮದ್ ಇದ್ದರು.
ಕಾಂಗ್ರೆಸ್ ನಿಯೋಗ ಭೇಟಿ:
ಈ ಯೋಜನೆ ರದ್ದುಗೊಳಿಸುವಂತೆ ಆಗ್ರಹಿಸಿ, ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದ ನಿಯೋಗವು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಬೆಳಗಾವಿ ಸುವರ್ಣಸೌಧದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಸಹಕಾರಿ ಸಂಘದ ಅಧ್ಯಕ್ಷ ಸುದರ್ಶನ್ ಜೈನ್, ರೋಯ್ ಕಾರ್ಲೊ, ಸಂತೋಷ್ ಪಿಂಟೊ, ವಿನ್ಸೆಂಟ್ ಡೇಸಾ, ಜೊಸ್ಸಿ ಪಿಂಟೋ ನಿಯೋಗದಲ್ಲಿದ್ದರು.
