ಮುಂಬಯಿ : ಕನ್ನಡಿಗರಲ್ಲಿ ಮಾತೃಭಾಷಾಭಿಮಾನ ಹೆಚ್ಚಾಗಿರುತ್ತದೆ ಅನ್ನುವುದನ್ನು ಈ ಕನ್ನಡ ವಿಭಾಗ ಜಾಗತಿಕವಾಗಿ ಸಿದ್ಧಿಸಿ ತೋರಿಸಿದೆ. ನಿತ್ಯಾನಂದರು ರಚಿಸಿದ ಈ ಅದು ಸಾಹಿತ್ಯ ಕೃತಿ ಅಲ್ಲವಾಗಿದ್ದರೂ ಸಾಹಿತ್ಯವನ್ನು ಪೋಷಿಸಿ ಬೆಳೆಸಿದ ದಿವ್ಯಚೇತನ ಜಯ ಸುವರ್ಣರ ಜೀವನಶೈಲಿಯನ್ನು ಕೃತಿ ರೂಪವಾಗಿಸಿ ಸಾಹಿತ್ಯಲೋಕಕ್ಕೆ ಅರ್ಪಿಸಿರುವುದು ಪ್ರಶಂಸನೀಯ ಎಂದು ಹೇರ್ ಸ್ಟೈಲೋ ಪ್ರಸಿದ್ಧ ಕೇಶ ವಿನ್ಯಾಸ ಸಂಸ್ಥೆ ಶಿವಾ’ಸ್ ಹೇರ್ ಡಿಝೈರ್ಸ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ, ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಡಾ| ಶಿವರಾಮ ಕೆ.ಭಂಡಾರಿ ತಿಳಿಸಿದರು.DSC_5486

ಸಾಂತಾಕ್ರೂಜ್ ಪೂರ್ವದಲ್ಲಿನ ಕಲೀನಾ ಕ್ಯಾಂಪಸ್‌ನಲ್ಲಿರುವ ಮುಂಬಯಿ ವಿವಿ ವಿದ್ಯಾನಗರಿಯ ಕನ್ನಡ ವಿಭಾಗದ ಸಭಾಗೃಹದಲ್ಲಿ ಇಂದಿಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು, ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಇವರ ಅಧ್ಯಕ್ಷತೆಯಲ್ಲಿ ನಡೆಸಲಾದ ಕೃತಿ ಬಿಡುಗಡೆ ಮತ್ತು ಸಾಹಿತ್ಯ ಸಂವಾದ ಕಾರ್ಯಕ್ರಮದ ಲ್ಲಿ ಮುಖ್ಯ ಅತಿಥಿಯಾಗಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಅಧ್ಯಕ್ಷ ರೋನ್ಸ್ ಬಂಟ್ವಾಳ್, ಅತಿಥಿ ಅಭ್ಯಾಗತರಾಗಿ ಹಿರಿಯ ಸಾಹಿತಿ ಕೊಲ್ಯಾರು ರಾಜು ಶೆಟ್ಟಿ ಉಪಸ್ಥಿತರಿದ್ದು ಬಿಲ್ಲವರ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಆಂಗ್ಲ ಭಾಷೆಯಲ್ಲಿ ರಚಿಸಿದ `ಜಯ ಸಿ.ಸುವರ್ಣ’ ಪುಸ್ತಕ ಬಿಡುಗಡೆ ಗೊಳಿಸಿ ಶಿವರಾಮ ಭಂಡಾರಿ ಮಾತನಾಡಿ ಮುಂಬಯಿ ವಿಶ್ವವಿದ್ಯಾಲಯದ ಮರಾಠಿ ಭವನದಲ್ಲಿ ಅವರ ಕೃತಿ ಬಿಡುಗಡೆ ಗೊಂಡಿರುವುದನ್ನು ನೆನಪಿಸಿಕೊಂಡ ತನ್ನ ಕೃತಿಗೆ ಎಲ್ಲಡೆ ಆದ್ಯತೆ ಸಿಕ್ಕಿರುವುದು ಖುಷಿ ತಂದಿದೆ ಎಂದರು. ಹಾಗೂ ಕನ್ನಡ ವಿಭಾಗದ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.DSC_5490

ಸ್ವರ್ಗೀಯ ಎಂ.ಬಿ ಕುಕ್ಯಾನ್ ಚಿನ್ನದ ಪದಕಕ್ಕೆ ಆಯ್ಕೆಯಾದ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಎಂ.ಎ ರ‍್ಯಾಂಕ್ ವಿಜೇತ ವಿದ್ಯಾರ್ಥಿನಿ ಪಾರ್ವತಿ ಸುಧಾಕರ್ ಪೂಜಾರಿ (ತೆಕ್ಕಟ್ಟೆ- ಕುಂದಾಪುರ) ರಚಿತ ಕೊಲ್ಯಾರು ರಾಜು ಶೆಟ್ಟಿ ಅವರ ಬದುಕು ಬರಹದ ಬಗ್ಗೆ ಶೋಧ ಸಂಪ್ರಬಂಧವನ್ನು ವಿಭಾಗಕ್ಕೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಡಾ| ಜಿ.ಎನ್ ಉಪಾಧ್ಯ ರಚಿತ ಅಯ್ದ ಲೇಖನಗಳ ಸಂಗ್ರಹ ಸಾಹಿತ್ಯ ಮಾರ್ಗ ಕೃತಿಯನ್ನು ಡಾ| ಭಂಡಾರಿ ಅನಾವರಣ ಗೊಳಿಸಿ ಶುಭಾರೈಸಿದರು.DSC_5517

ರೋನ್ಸ್ ಬಂಟ್ವಾಳ್ ಮಾತನಾಡಿ ಕನ್ನಡ ವಿಭಾಗದ ಕಾರ್ಯವೈಖರಿ ಮತ್ತು ವಿದ್ಯಾಥಿಗಳ ಪ್ರೋತ್ಸಾಹ ಹಾಗೂ ಕನ್ನಡದ ಕಾಯಕವನ್ನು ಕೊಂಡಾಡಿದರು. ಸಾಮಾಜಿಕವಾಗಿ ತಮ್ಮ ಕರ್ತವ್ಯವನ್ನು ಹಾಗೂ ಶಿವರಾಮ ಭಂಡಾರಿ ಅವರ ಸಾಧನೆಯನ್ನು ಉಲ್ಲೇಖಿಸಿ ಪ್ರಶಂಸಿಸಿದರು.DSC_5518

ಯಕ್ಷಗಾನದಲ್ಲಿ ವಿಶೇಷ ಅಭಿರುಚಿಯನ್ನು ಹೊಂದಿರುವ ನನ್ನಲ್ಲಿ ತಾಳಮದ್ದಲೆಗೆ ವಿಶೇಷ ಅಧ್ಯಯನ ಮಾಡಬೇಕು ಅಂದುಕೊಂಡಿದ್ದು ಅದಕ್ಕಾಗಿ ಅಗಾಧ ಸ್ಮರಣಶಕ್ತಿ ಬೇಕು ಎಂದು ಕೊಲ್ಯಾರು ರಾಜು ಶೆಟ್ಟಿ ಕಳೆದ ಆರು ದಶಕಗಳ ಮುಂಬಯಿ ಮಾಯಾನಗರಿಯ ಜೀವನದ ತಮ್ಮ ಅನುಭವವನ್ನು ತೆರೆದಿಟ್ಟರು.DSC_5541

ಕೃತಿಕರ್ತ ನಿತ್ಯಾನಂದ ಕೋಟ್ಯಾನ್ ಅವರು ಜಯ ಸುವರ್ಣ ಹಾಗೂ ಅವರ ಬಾಂಧವ್ಯದ ಕುರಿತು ಕೆಲವೊಂದು ಮನದಾಳದ ಮಾತುಗಳನ್ನು ಭಾವನಾತ್ಮಕವಾಗಿ ತೆರೆದಿಟ್ಟರು. ಸುವರ್ಣರ ಪ್ರಥಮ ಪುಣ್ಯ ತಿಥಿಯ ದಿನ ಅವರ ಒಡನಾಟದ ನೆನಪಿನ ಸಲುವಾಗಿ ಅರ್ಪಣೆ ಮಾಡುವ ಉದ್ದೇಶದಿಂದ ಈ ಕೃತಿ ಸಿದ್ಧಪಡಿಸಿದೆ. ಅದೇ ದಿನ ಬಿಎಂಸಿ ಗೋರೆಗಾಂವ್ ಪೂರ್ವದ ರಸ್ತೆಗೆ ಜಯ ಸಿ.ಸುವರ್ಣ ಮಾರ್ಗ ಎಂದು ಘೋಷಣೆ ಮಾಡಿರುವುದು ಹರ್ಷತಂದಿದೆ. ಈ ಕೃತಿ ಕನ್ನಡ ವಿಭಾಗದಲ್ಲಿ ಲೋಕಾರ್ಪಣೆಗೊಂಡಿರುವು ಸಂತಸ ತಂದಿದೆ ಎಂದರು.DSC_5576

ಡಾ| ಜಿ ಎನ್ ಉಪಾಧ್ಯ ಅವರಿಂದಾಗಿ ಸಾಮಾನ್ಯ ಜನರೂ ವಿವಿಗೆ ಹತ್ತಿರ ಆದರು ಉಪಾಧ್ಯ ಅವರಿಂದಾಗಿ ವಿವಿ ಮಟ್ಟದಲ್ಲಿ ಗುರುತಿಸಿ ನನ್ನ ಕುರಿತು ಪುಸ್ತಕ ಹೊರತರುವಂತಾಯ್ತು. ಅವರ ಬದುಕು ಬರಹದ ಕುರಿತು ಕೃತಿಯನ್ನು ರಚಿಸಿದ ಪಾರ್ವತಿ ಪೂಜಾರಿ ಅವರ ಅವರ ಶ್ರಮ ಸಾಧನೆ ಪ್ರಶಂಸನೀಯ ಎಂದು ಕೊಲ್ಯಾರು ತಿಳಿಸಿದರು.DSC_5545

ಸಂಘಟನೆಯಿAದ ಬಲಯುತರಾಗಿರಿ, ವಿದ್ಯೆಯಿಂದ ಸ್ವತಂತ್ರರಾಗಿರಿ ಎಂಬ ನಾರಾಯಣ ಗುರುಗಳ ತತ್ವವನ್ನು ನೆನಪಿಸಿಕೊಂಡರು. ಮುಂಬಯಿಯನ್ನು ಬೆಳೆಸುವುದರಲ್ಲಿ ತುಳು ಕನ್ನಡಿಗರ ಪಾತ್ರ ಮಹತ್ತರವಾದುದು. ಸಂಶೋಧನೆಯಲ್ಲಿ ತೊಡಗಿರುವ ವಿದ್ಯಾಥಿಗಳಿಗೆ ಸಹಕಾರದ ಅಗತ್ಯತೆಯನ್ನು ಗಮನಕ್ಕೆ ತಂದರು. ಜಯ ಸುವರ್ಣರ ಕುರಿತಾದ ಕೃತಿ ಕನ್ನಡ ವಿಭಾಗದಲ್ಲಿ ಬಿಡುಗಡೆಗೊಳಿಸಿದಕ್ಕೆ ಸಂಭ್ರಮದ ತಂದಿದೆ ಎಂದ ಅಧ್ಯಕ್ಷೀಯ ಭಾಷ್ಣದಲ್ಲಿ ಡಾ| ಉಪಾಧ್ಯ ತಿಳಿಸಿದರು.Kannada Dept. Shivaram Bhandary A2

ಇದೇ ಸಂದರ್ಭದಲ್ಲಿ ಕನ್ನಡ ವಿಭಾಗದ ಸಂಶೋಧನಾ ವಿದ್ಯಾಥಿಗಳ ವಿದ್ಯಾಚೇತನ ಪುರಸ್ಕಾರ ನಾಮಾಂಕಿತ ಶಿಷ್ಯವೇತನವಾಗಿಸಿ ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ನ ವಿಶ್ವಸ್ಥೆ ಅನುಶ್ರೀ ಶಿವರಾಮ ಭಂಡಾರಿ ಇವರು ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿ ಜಯ ಸಿ.ಸಾಲ್ಯಾನ್ ಅವರಿಗೆ ಮತ್ತು ಉದ್ಯಮಿ ರಮಾನಂದ ಸಾಲ್ಯಾನ್ ಅಳಿಯೂರು (ಮೂಡಬಿದ್ರೆ) ಇವರು ಅನಿತಾ ಪಿ.ತಾಕೊಡೆ ಅವರಿಗೆ ಕೊಡಮಾಡಿದ ಮೊತ್ತವನ್ನು ರೋನ್ಸ್ ಬಂಟ್ವಾಳ್ ಹಸ್ತಾಂತರಿಸಿದರು.DSC_5520

ಕಾರ್ಯಕ್ರಮದಲ್ಲಿ ಪಾರ್ವತಿ ಪೂಜಾರಿ ಅವರು ಕೊಲ್ಯಾರು ರಾಜು ಶೆಟ್ಟಿ ಅವರ ಬದುಕು ಬರಹ ಕೃತಿಯನ್ನು ಮುಂಬಯಿ ವಿಶ್ವವಿದ್ಯಾಲಯಕ್ಕೆ ಗ್ರಂಥ ಗೌರವ ಸಮರ್ಪಣೆ ಮಾಡಿದರು. ಎಂ. ಬಿ ಕುಕ್ಯಾನ್ ಬಂಗಾರದ ಪದಕ ಪಡೆದಿರುವ ಪಾರ್ವತಿ ಪೂಜಾರಿ ಹಾಗೂ ಕಲಾ ಭಾಗ್ವತ್, ಸಂಶೋಧನ ವಿದ್ಯಾರ್ಥಿಗಳಾದ ನಳಿನಾ ಪ್ರಸಾದ್ ಹಾಗೂ ಅನಿತಾ ಪಿ.ತಾಕೊಡೆ ಅವರಿಗೆ ಡಾ| ಉಪಾಧ್ಯ ಗ್ರಂಥ ಗೌರವ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಜಮೀಲ ಬಾನು, ಸವಿತಾ ಆರುಣ್ ಶೆಟ್ಟಿ, ಲಕ್ಷ್ಮೀ ರಾಥೋಡ್ ಉಪಸ್ಥಿತರಿದ್ದು ಕಲಾಭಾಗ್ವತ್ ಸ್ವಾಗತ ಗೀತೆ ಹಾಡಿದರು. ಪ್ರತಿಭಾ ರಾವ್ ವಂದನಾರ್ಪಣೆಗೈದರು.

By Suddi9

Leave a Reply

Your email address will not be published. Required fields are marked *