ಮುಂಬಯಿ : ದೇವಾಡಿಗ ಸಂಘ ಮುಂಬಯಿ ಇದರ ಮಾಜಿ ಅಧ್ಯಕ್ಷ, ಹಿರಿಯ ಮುತ್ಸದ್ಧಿ ಎಸ್.ಕೆ ಶ್ರೀಯಾನ್ ಇವರ ಧರ್ಮಪತ್ನಿ ವನಿತಾ ಎಸ್. ಶ್ರೀಯಾನ್ (೮೨.) ಡಿ.೧೦ರಂದು  ಶುಕ್ರವಾರ ಮುಂಜಾನೆ ಘನ್ಸೋಲಿ ಇಲ್ಲಿನ ರಿಲಾಯನ್ಸ್ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸ್ವಸ್ಥತೆಯಿಂದ ನಿಧನರಾದರು.Vanita S K Shriyan (A)

ಮಂಗಳೂರು ಮೂಲತಃ ಮೃತರು ಮುಂಬಯಿ ಮುಲುಂಡ್ ಅಲ್ಲಿನ ಚೇರಿಸ್ ಸಿಟಿ ಆಫ್ ಜೊಯ್ ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿದ್ದರು. ಮೃತರು ಎರಡು ಗಂಡು, ಎರಡು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಅಣ್ಣಯ್ಯ ಶೇರಿಗಾರ, ವಿಶ್ವಸ್ಥ ಸದಸ್ಯರಾದ ನಾರಾಯಣ ಎಂ.ದೇವಾಡಿಗ ದುಬಾಯಿ, ಮಾಜಿ ಅಧ್ಯಕ್ಷ ಧರ್ಮಪಾಲ್ ಯು. ದೇವಾಡಿಗ, ದೇವಾಡಿಗ ಸಂಘ ಉಡುಪಿ ಅಧ್ಯಕ್ಷ ರತ್ನಾಕರ ದೇವಾಡಿಗ ಸೇರಿದಂತೆ ಅನೇಕ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ವನಿತಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

By suddi9

Leave a Reply

Your email address will not be published. Required fields are marked *