ಬಂಟ್ವಾಳ: ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಯಿ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಬೂತ್ ಅಧ್ಯಕ್ಷರುಗಳ ಮನೆ ಭೇಟಿ “ನಮ್ಮ ನಡೆ ಬೂತ್ ಕಡೆ” ಕಾರ್ಯಕ್ರಮವು ಮಾಜಿ ಸಚಿವ ಶ್ರೀ ಬಿ ರಮಾನಾಥ ರೈಯವರ ಮಾರ್ಗದರ್ಶನದಲ್ಲಿ ಡಿ.12ರಂದು ಗುರುವಾರ ನಡೆಯಿತು.
ಬೂತ್ ಅಧ್ಯಕ್ಷರ ನಿವಾಸದಲ್ಲಿ ತೆಂಗಿನ ಸಸಿ ನೆಟ್ಟು “ಕಾಂಗ್ರೆಸ್ ಪಕ್ಷ ಕಲ್ಪವೃಕ್ಷ” ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಮಾನಾಥ ರೈಯವರು ಮಾತನಾಡಿ ಕಾರ್ಯಕರ್ತರು ತಮ್ಮ ವೈಯಕ್ತಿಕ ವರ್ಚಸ್ಸನ್ನು ವೃದ್ಧಿಸುವ ಜೊತೆಗೆ ಪಕ್ಷದ ತತ್ವ ಸಿದ್ಧಾಂತದಲ್ಲಿ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಮಾತನಾಡಿ ಕಾರ್ಯಕರ್ತರು ಪಕ್ಷದ ಬಲವರ್ಧನೆಯಲ್ಲಿ ಸ್ಥಳೀಯ ಮಟ್ಟದ ನಾಯಕರ ಜೊತೆ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸುಧೀರ್ ಶೆಟ್ಟಿ, ಬೂತ್ ಅಧ್ಯಕ್ಷರಾದ ಪಿ ರಾಮಸುಂದರ್ ಗೌಡ, ಚಂದ್ರಶೇಖರ ಆಚಾರ್ಯ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಜಗದೀಶ್ ಕೊಯಿಲ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಪೂಜಾರಿ ಜೋರಾ, ಹಿಂದುಳಿದ ವರ್ಗದ ಅಧ್ಯಕ್ಷರಾದ ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ, ಮುಖಂಡರಾದ ರಮೇಶ್ ನಾಯಕ್ ರಾಯಿ, ಮೋಹನ್ ಪೂಜಾರಿ ರಾಯಿ, ಸದಾನಂದ ಕುಲಾಲ್ ಶೀತಲ್, ಕೆ ಪಿ ಲೋಬೋ, ಶೇಖರ್ ಶೆಟ್ಟಿ, ಶ್ರೀಮತಿ ಜಯಲಕ್ಷ್ಮಿ, ಜಯಪ್ರಕಾಶ್, ರಾಮಚಂದ್ರ ಶೆಟ್ಟಿಗಾರ್, ಪ್ರಕಾಶ್ ಜೈನ್ ಬದನಾಡಿ, ನಾರಾಯಣ ಗೌಡ, ಸೀತರಾವi ಗೌಡ ರಿತೇಶ್, ಹೃಷಿಕೇಶ್, ಶ್ರೀಮತಿ ಭಾರತಿ ಉಪಸ್ಥಿತರಿದ್ದರು.
