ಬೆಂಗಳೂರು: ಇಂದಿನಿಂದ ಆಟೋ ದರ ಏರಿಕೆಯಾಗಿದೆ. ಇದು ಆಟೋ ಪ್ರಯಾಣಿಕರಿಗೆ ಶಾಕ್ ಕೊಟ್ಟಿದೆ. ಆದ್ರೆ ಆಟೋ ಚಾಲಕರು ಮಾತ್ರ ಫುಲ್ ಖುಷ್ ಆಗಿದ್ದು 8 ವರ್ಷದ ಬಳಿಕ ದರ ಏರಿಕೆಯಾಗಿರುವುದರಿಂದ ಸಂಭ್ರಮಿಸುತ್ತಿದ್ದಾರೆ. ಇಂದಿನಿಂದ ಪ್ರಯಾಣಿಕರ ಬಳಿ ಜಾಸ್ತಿ ಹಣ ಇಸ್ಕೋಬಹುದು ಎಂದು ಖುಷ್ ಆಗಿ ರೋಡಿಗಿಳಿದ ಆಟೋ ಚಾಲಕರಿಗೆ ಬೆಳ್ಳಂ ಬೆಳ್ಳಗ್ಗೆ‌ ಶಾಕ್ ಆಗಿದೆ. 1 ಲೀ. ಆಟೋ ಗ್ಯಾಸ್ ದರ 3 ರೂಪಾಯಿ 5 ಪೈಸೆ ಏರಿಕೆಯಾಗಿದೆ. ಹಾಗಾದ್ರೆ ಮತ್ತೊಂದು ಸುತ್ತು ಆಟೋ ದರ ಏರಿಕೆಯಾಗುತ್ತಾ? ಎಂಬ ಆತಂಕ ಹೆಚ್ಚಾಗಿದೆ. ಏಕೆಂದರೆ ಆಟೋ ಗ್ಯಾಸ್ ದರ ಏರಿಕೆಯಾಗಿರುವುದು ಚಾಲಕರಿಗೆ ಹೊರೆಯಾಗಲಿದೆ. ಹೀಗಾಗಿ ಮತ್ತೊಂದು ಸುತ್ತು ಆಟೋ ದರ ಏರಿಕೆಯಾಗುವ ಸಾಧ್ಯತೆ ಇದೆ.Auto-gas

ಸದ್ಯ ಆಟೋ ದರ ಏರಿಕೆಯಾಯ್ತು, ಸ್ವಲ್ಪ ದುಡ್ಡು ಉಳಿಸಬಹುದು ಎಂದುಕೊಂಡಿದ್ದ ಆಟೋ ಚಾಲಕರು ಗ್ಯಾಸ್ ದರ ಏರಿಕೆಯಿಂದ ಕಂಗಾಲಾಗಿದ್ದಾರೆ. ನಿನ್ನೆ 66 ರೂಪಾಯಿ ಇದ್ದ ಗ್ಯಾಸ್ ದರ ಇಂದು 69.5 ರೂ. ಆಗಿದೆ. ಆಟೋ ಗ್ಯಾಸ್ ದರ ಏರಿಕೆ ವಿರುದ್ಧ ಚಾಲಕರು ಆಕ್ರೋಶ ಹೊರ ಹಾಕಿದ್ದಾರೆ. ಇಂದಿನಿಂದ ಪರಿಷ್ಕೃತ ಆಟೋ ಪ್ರಯಾಣ ದರ ಜಾರಿಯಾಗಿದ್ದು ಕನಿಷ್ಠ ಪ್ರಯಾಣದ ದರ 5 ರೂ. ಏರಿಕೆ ಮಾಡಲಾಗಿತ್ತು. ಆದ್ರೆ ಬೆಳಗ್ಗೆಯಿಂದ ಆಟೋ ಗ್ಯಾಸ್‌ ದರವೂ ಸಹ ಹೆಚ್ಚಳವಾಗಿದೆ. ಹೀಗಾದ್ರೆ ನಾವು ಜೀವನ ಮಾಡುವುದು ಹೇಗೆಂದು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

By Suddi9

Leave a Reply

Your email address will not be published. Required fields are marked *